ಅಮೆರಿಕ : ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ಪ್ರಮುಖ ಸ್ವಿಂಗ್ ಸ್ಟೇಟ್ ಎನಿಸಿಕೊಂಡಿರುವ ಮಿಚಿಗನ್ ರಾಜ್ಯದ ಸೆನೆಟ್ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಅಬ್ದುಲ್ ಎಲ್ ಸಯೀದ್ ಅವರು ಆಯ್ಕೆಯಾಗಿದ್ದಾರೆ. ಈ ಗೆಲುವಿನೊಂದಿಗೆ ಅಮೆರಿಕದ ರಾಜಕೀಯ ಇತಿಹಾಸದಲ್ಲೇ ಸೆನೆಟ್ಗೆ ಆಯ್ಕೆಯಾದ ಮೊದಲ ಮುಸ್ಲಿಂ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದು, ಹಲವು ಹೊಸ ದಾಖಲೆಗಳಿಗೆ ಈ ಫಲಿತಾಂಶ ಸಾಕ್ಷಿಯಾಗಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಈ ಹಣಾಹಣಿಯಲ್ಲಿ ಸಯೀದ್ ಅವರು ರಿಪಬ್ಲಿಕನ್ ಪಕ್ಷದ ಪ್ರಬಲ ಸ್ಪರ್ಧಿ ಮೈಕ್ ರೋಜರ್ಸ್ ವಿರುದ್ಧ ಜಯಗಳಿಸಿದ್ದಾರೆ. ಸಾರ್ವಜನಿಕ ಆರೋಗ್ಯ ತಜ್ಞ ಹಾಗೂ ವೈದ್ಯರೂ ಆಗಿರುವ ಅಬ್ದುಲ್ ಎಲ್ ಸಯೀದ್ ಅವರ ಈ ಯಶಸ್ಸು, ಡೆಮಾಕ್ರಟಿಕ್ ಪಕ್ಷಕ್ಕೆ ಸೆನೆಟ್ನಲ್ಲಿ ಬಲ ತುಂಬಿದ್ದಲ್ಲದೆ ಅಮೆರಿಕದ ರಾಜಕೀಯ ಶಕ್ತಿಯ ಸಮತೋಲನದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ.