image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಜಾತಿ ಬೇರೆ ಬೇರೆಯಾದರೂ ಧರ್ಮ ಮತ್ತು ಸಂಸ್ಕೃತಿ ಒಂದೇ : ಸಿ ಟಿ ರವಿ

ಜಾತಿ ಬೇರೆ ಬೇರೆಯಾದರೂ ಧರ್ಮ ಮತ್ತು ಸಂಸ್ಕೃತಿ ಒಂದೇ : ಸಿ ಟಿ ರವಿ

ಜಮಖಂಡಿ: ಜಮಖಂಡಿ ತಾಲ್ಲೂಕಿನ ಕಡಪಟ್ಟಿ ಶ್ರೀ ಬಸವಣ್ಣ ದೇವಸ್ಥಾನದ ಆವರಣದಲ್ಲಿ ನಡೆದ ಶ್ರೀಮದ್ ರಂಭಾಪುರಿ ಜಗದ್ಗುರುಗಳ 35ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಭಾಗವಹಿಸಿ ಮಾತನಾಡಿದರು. ಜಾತಿಗಳು ಬೇರೆ ಇರಬಹುದು ಆದರೆ ನಮ್ಮ ನೀತಿ ಹಾಗೂ ಸಂಸ್ಕೃತಿ ಒಂದೇ ಆಗಿದ್ದು, ವೀರಶೈವ ಮತ್ತು ಲಿಂಗಾಯತ ಸಮಾಜವನ್ನು ವಿಭಜಿಸಿ ರಾಜಕೀಯ ಲಾಭ ಪಡೆಯುವ ಪ್ರಯತ್ನಗಳಿಗೆ ಅವಕಾಶ ನೀಡಬಾರದು ಎಂದು ಅವರು ತಿಳಿಸಿದರು. ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದರೆ ಮಾತ್ರ ಧರ್ಮ, ಸಂಸ್ಕೃತಿ ಮತ್ತು ದೇಶದ ಅಸ್ಮಿತೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.  

​ಬಸವಣ್ಣನವರ ವಚನಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಮಾನವ ಧರ್ಮದ ಶ್ರೇಷ್ಠತೆಯಾಗಿದೆ ಎಂದು ತಿಳಿಸಿದ ಅವರು, ಮಾನವ ಧರ್ಮದಿಂದ ಮಾತ್ರ ವಿಶ್ವಶಾಂತಿ ಸಾಧ್ಯ ಹಾಗೂ ಸನಾತನ ಧರ್ಮವು ಸಮಸ್ತ ಸೃಷ್ಟಿಯ ಒಳಿತನ್ನು ಬಯಸುತ್ತದೆ ಎಂದು ಹೇಳಿದರು. ಕೃಷಿಯಲ್ಲಿ ರಾಸಾಯನಿಕಗಳ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯ ಹದಗೆಡುತ್ತಿದ್ದು, ರೈತರ ಸ್ವಾವಲಂಬನೆ ಮತ್ತು ಸ್ವಾಭಿಮಾನಕ್ಕೆ ಸಮಾಜದಲ್ಲಿ ಗೌರವ ಸಿಗಬೇಕು ಎಂದು ಕಳಕಳಿ ವ್ಯಕ್ತಪಡಿಸಿದರು. ನವರಾತ್ರಿಯು ದುಷ್ಟಶಕ್ತಿಗಳ ವಿರುದ್ಧ ಜಾಗೃತಿಯ ಸಂಕೇತವಾಗಿದ್ದು, ಧರ್ಮ ಮತ್ತು ರಾಷ್ಟ್ರದ ರಕ್ಷಣೆಗೆ ಸದಾ ಸಿದ್ಧರಾಗಿರಬೇಕು ಎಂದು ಅವರು ಕರೆ ನೀಡಿದರು. ಈ ಧರ್ಮ ಸಮ್ಮೇಳನದಲ್ಲಿ ವಿವಿಧ ಪೀಠಾಧಿಪತಿಗಳು, ಗಣ್ಯರು ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ