image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಏಷ್ಯನ್ ಗೇಮ್ಸ್ ಹಾಕಿ: ಚೀನಾ ಮಣಿಸಿದ ಭಾರತೀಯ ವನಿತೆಯರಿಗೆ ಐತಿಹಾಸಿಕ ಚಿನ್ನ!

ಏಷ್ಯನ್ ಗೇಮ್ಸ್ ಹಾಕಿ: ಚೀನಾ ಮಣಿಸಿದ ಭಾರತೀಯ ವನಿತೆಯರಿಗೆ ಐತಿಹಾಸಿಕ ಚಿನ್ನ!

ನಗೋಯಾ : ಐಚಿ-ನಗೋಯಾದಲ್ಲಿ ನಡೆದ ಏಷ್ಯನ್ ಗೇಮ್ಸ್ ಮಹಿಳಾ ಹಾಕಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಹಾಲಿ ಚಾಂಪಿಯನ್ ಚೀನಾವನ್ನು 1-0 ಅಂತರದಿಂದ ಪರಾಭವಗೊಳಿಸಿ ಐತಿಹಾಸಿಕ ಸ್ವರ್ಣ ಪದಕ ಮುಡಿಗೇರಿಸಿಕೊಂಡಿದೆ. ಈ ರೋಚಕ ಗೆಲುವಿನೊಂದಿಗೆ ಭಾರತೀಯ ವನಿತೆಯರು ಬರೋಬ್ಬರಿ 44 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಏಷ್ಯನ್ ಗೇಮ್ಸ್‌ನಲ್ಲಿ ಬಂಗಾರದ ಪದಕ ಗೆದ್ದುಕೊಂಡಿದ್ದು, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆಯನ್ನೂ ಪಡೆದುಕೊಂಡಿದ್ದಾರೆ.

ಶುಕ್ರವಾರ ನಡೆದ ಈ ಮಹತ್ವದ ಫೈನಲ್ ಹಣಾಹಣಿಯಲ್ಲಿ ವಿಶ್ವ ಶ್ರೇಯಾಂಕದಲ್ಲಿ 8ನೇ ಸ್ಥಾನದಲ್ಲಿರುವ ಭಾರತ ತಂಡವು, 4ನೇ ಶ್ರೇಯಾಂಕಿತ ಬಲಶಾಲಿ ಚೀನಾ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿತು. ಪಂದ್ಯದ 10ನೇ ನಿಮಿಷದಲ್ಲಿ ಲಾಲ್‌ರೆಮ್ಸಿಯಾಮಿ ಗಳಿಸಿದ ಅದ್ಭುತ 'ಫೀಲ್ಡ್ ಗೋಲ್' ಭಾರತಕ್ಕೆ ನಿರ್ಣಾಯಕ ಮುನ್ನಡೆ ತಂದುಕೊಟ್ಟಿತು.

ಪಂದ್ಯದ ಉಳಿದ ಅವಧಿಯಲ್ಲಿ ಚೀನಾ ತಂಡವು ಸಮಬಲ ಸಾಧಿಸಲು ತೀವ್ರ ಯತ್ನ ನಡೆಸಿದರೂ, ಭಾರತೀಯ ರಕ್ಷಣಾ ವ್ಯೂಹವನ್ನು ಭೇದಿಸಲು ಸಾಧ್ಯವಾಗಲಿಲ್ಲ. 1982ರ ನಂತರ ಭಾರತೀಯ ಮಹಿಳಾ ಹಾಕಿ ತಂಡವು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಹೊಸ ಇತಿಹಾಸ ಬರೆದಿದೆ.

Category
ಕರಾವಳಿ ತರಂಗಿಣಿ