image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಂಘನಿಕೇತನ ಸಾರ್ವಜನಿಕ ಶ್ರೀ ಗಣೇಶೋತ್ಸವದ 79 ನೇ ವರ್ಷದ ಆಮಂತ್ರಣ ಪತ್ರಿಕೆ ಬಿಡುಗಡೆ

ಸಂಘನಿಕೇತನ ಸಾರ್ವಜನಿಕ ಶ್ರೀ ಗಣೇಶೋತ್ಸವದ 79 ನೇ ವರ್ಷದ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು : ನಗರದ ಪ್ರತಾಪ ನಗರದಲ್ಲಿರುವ ಸಂಘನಿಕೇತನದಲ್ಲಿ ಕೇಶವ  ಸ್ಮ್ರತಿ    ಸಂವರ್ಧನ ಟ್ರಸ್ಟ್ ಇದರ ಆಶ್ರಯದಲ್ಲಿ  ನಡೆಯಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ೭೯ ನೇ ವರ್ಷದ ಆಮಂತ್ರಣ ಪತ್ರಿಕೆಯನ್ನು  ಬಿಡುಗಡೆ ಗೊಂಡಿತು  . ಐದು ದಿನಗಳ ಪರ್ಯಂತ ಗಣೇಶೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದ್ದು ವಿವಿಧ ಧಾರ್ಮಿಕ , ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿರುವುದು.

ರಾಷ್ಟ್ರೀಯ   ಸ್ವಯಂ ಸೇವಕ ಸಂಘದ ಮಂಗಳೂರು ಮಹಾನಗರ ಮಾನ್ಯ ಸಂಘಚಾಲಕ್ ಡಾ . ಸತೀಶ್ ರಾವ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು . ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಚಾರಕರಾದ ಶ್ರೀ ಸುರೇಶ್ ಜಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು . ಕೇಶವ  ಸ್ಮ್ರತಿ    ಸಂವರ್ಧನ ಟ್ರಸ್ಟ್ ನ ಉಪಾಧ್ಯಕ್ಷ ಶ್ರೀ ಕೆ . ರಘುವೀರ್ ಕಾಮತ್ , ಕಾರ್ಯದರ್ಶಿ ಗಜಾನನ ಪೈ , ಸೇವಾ ಭಾರತಿ ಪ್ರಮುಖ ವಿನೋದ್ ಶೆಣೈ  ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರುಗಳಾದ ಶ್ರೀ . ಆನಂದ ಪಾಂಗಳ , ಶ್ರೀ ಕೆ . ಪದ್ಮನಾಭ , ಸ್ಮಿತಾ ಎಂ , ಪ್ರಧಾನ ಕಾರ್ಯದರ್ಶಿ ಶ್ರೀ ಜಿ . ಸುರೇಶ್ ವಿ . ಕಾಮತ್ , ಕೋಶಾಧಿಕಾರಿ ಶ್ರೀ ರಂಗನಾಥ್ ಹಾಗೂ ಜೊತೆಕಾರ್ಯದರ್ಶಿಗಳಾದ ನಂದನ್ ಮಲ್ಯ , ಜೀವನರಾಜ್ ಶೆಣೈ , ಗಣೇಶ್ ಪ್ರಸಾದ್ ಹಾಗೂ ಪೂರ್ಣಿಮಾ ಶೆಣೈ ಉಪಸ್ಥಿತರಿದ್ದರು .

Category
ಕರಾವಳಿ ತರಂಗಿಣಿ