image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಶೇಷ ಮಕ್ಕಳಿಗೆ ಅಗತ್ಯ ವಸ್ತುಗಳ ಕೊಡುಗೆ ನೀಡಿದ 'ಸ್ನೇಹಿ ಸಹೋದರಿಯರು'

ವಿಶೇಷ ಮಕ್ಕಳಿಗೆ ಅಗತ್ಯ ವಸ್ತುಗಳ ಕೊಡುಗೆ ನೀಡಿದ 'ಸ್ನೇಹಿ ಸಹೋದರಿಯರು'

ಮಂಗಳೂರು: ಅರ್ಹರಿಗೆ ಹಾಗೂ ಅಗತ್ಯವಿರುವವರಿಗೆ ನೆರವಾಗುವ ಉದ್ದೇಶದೊಂದಿಗೆ 'ಸ್ನೇಹಿ ಸಹೋದರಿಯರು' ತಂಡವು ಮಂಗಳೂರು ಉತ್ತರದ ಕ್ಷೇತ್ರ ಸಂಪನ್ಮೂಲ ಕೇಂದ್ರದ ವಿಶೇಷ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿದೆ. ಆಗಸ್ಟ್ 13ರಂದು ಆಯೋಜಿಸಲಾಗಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಮಕ್ಕಳ ಅವಶ್ಯಕತೆಗಳಿಗೆ ಅನುಗುಣವಾಗಿ ಕೊಡುಗೆಗಳನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ವೇದಾವತಿ ರಾವ್, ವಿಶೇಷ ಸಂಪನ್ಮೂಲ ಶಿಕ್ಷಕರಾದ ನಾಗರಾಜ್, ರವಿಕಲ ಹಾಗೂ ಜ್ಯೋತಿ ಮತ್ತು ದಿವ್ಯಾಂಗ ಮಕ್ಕಳು ಹಾಗೂ ಅವರ ಪೋಷಕರು ಉಪಸ್ಥಿತರಿದ್ದರು. ಸ್ನೇಹಿ ತಂಡದ ಸಂಚಾಲಕಿ ಕಲಾವತಿ ಪದ್ಮನಾಭ, ಸದಸ್ಯರಾದ ಭಾರತಿ ರಾವ್, ಉಷಾ ಪ್ರಭಾಕರ್, ಗೀತಾ ಶೆಟ್ಟಿ, ಸ್ವರ್ಣ ಶೆಟ್ಟಿ, ಸ್ವರ್ಣಲತಾ ಎಂ., ರತ್ನಾವತಿ ಜೆ. ಬೈಕಾಡಿ, ಉಷಾ ಕಿರಣ್, ಜ್ಯೋತಿಕಾ ಜೈನ್, ವಿಜಯ ಮಲ್ಲಿ, ಡಯನಾ, ನಿರ್ಮಲ, ಉಷಾ ಶೆಟ್ಟಿ, ವಸಂತಿ ಕಾಮತ್ ಹಾಗೂ ಶಾಂಭವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Category
ಕರಾವಳಿ ತರಂಗಿಣಿ