image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಇನ್ನು ಮುಂದೆ ಏರ್ ಇಂಡಿಯಾ ಪೈಲಟ್‌ಗಳಿಗೆ ಸೈಕೋಆಕ್ಟಿವ್ ಸಬ್‌ಸ್ಟ್ಯಾನ್ಸ್ ಪರೀಕ್ಷೆ ಕಡ್ಡಾಯ

ಇನ್ನು ಮುಂದೆ ಏರ್ ಇಂಡಿಯಾ ಪೈಲಟ್‌ಗಳಿಗೆ ಸೈಕೋಆಕ್ಟಿವ್ ಸಬ್‌ಸ್ಟ್ಯಾನ್ಸ್ ಪರೀಕ್ಷೆ ಕಡ್ಡಾಯ

ನವದೆಹಲಿ: ಕಳೆದ ವಾರ ಪುಕೆಟ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ಹಠಾತ್ 300 ಅಡಿ ಕೆಳಗಿಳಿದ ಆಘಾತಕಾರಿ ಘಟನೆಯ ಬೆನ್ನಲ್ಲೇ, ಏರ್ ಇಂಡಿಯಾ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಎಲ್ಲಾ ಪೈಲಟ್‌ಗಳಿಗೆ ಸೈಕೋಆಕ್ಟಿವ್ ಸಬ್‌ಸ್ಟ್ಯಾನ್ಸ್ (ಮಾದಕ ವಸ್ತು) ಪರೀಕ್ಷೆಯನ್ನು ವಿಮಾನಯಾನ ಸಂಸ್ಥೆ ಕಡ್ಡಾಯಗೊಳಿಸಿದೆ.

ಟಾಟಾ ಗ್ರೂಪ್ ಒಡೆತನದ ಈ ಎರಡೂ ಸಂಸ್ಥೆಗಳಲ್ಲಿ 5,000ಕ್ಕೂ ಹೆಚ್ಚು ಪೈಲಟ್‌ಗಳಿದ್ದು, ಅನುಮತಿಸದ ಯಾವುದೇ ವಸ್ತು ಅಥವಾ ಔಷಧಿಗಳನ್ನು ಅವರು ಬಳಸಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಪೂರ್ಣ ಪ್ರಮಾಣದ ಸ್ಕ್ರೀನಿಂಗ್ ಕೈಗೊಳ್ಳಲಾಗುತ್ತಿದೆ. ಗುರುವಾರದಿಂದ ಆರಂಭವಾಗಲಿರುವ ಈ ಪರೀಕ್ಷೆಗಳು ಗುರುಗ್ರಾಮ್ ಅಕಾಡೆಮಿ, ವಿಮಾನ ಬ್ರೀಫಿಂಗ್ ಕೇಂದ್ರಗಳು ಹಾಗೂ ವಿವಿಧ ಕಾರ್ಯಾಚರಣಾ ನೆಲೆಗಳಲ್ಲಿ ಏಕಕಾಲದಲ್ಲಿ ನಡೆಯಲಿವೆ.

ಪ್ರಯಾಣಿಕರ ಅತ್ಯುನ್ನತ ಮಟ್ಟದ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಮತ್ತು ಸಂಸ್ಥೆಯ ಮೇಲಿನ ವಿಶ್ವಾಸಾರ್ಹತೆಯನ್ನು ಬಲಪಡಿಸಲು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಆಗಸ್ಟ್ 4 ರಂದು 137 ಪ್ರಯಾಣಿಕರು ಹಾಗೂ 8 ಸಿಬ್ಬಂದಿ ಸೇರಿದಂತೆ 145 ಜನರಿದ್ದ ಫುಕೆಟ್-ದೆಹಲಿ ವಿಮಾನವು (AI2379) ಪ್ರಕ್ಷುಬ್ಧತೆಯಿಂದಾಗಿ ಇದ್ದಕ್ಕಿದ್ದಂತೆ 300 ಅಡಿ ಕೆಳಕ್ಕೆ ಬಿದ್ದು ಕನಿಷ್ಠ 24 ಪ್ರಯಾಣಿಕರು ಗಾಯಗೊಂಡಿದ್ದರು. ಈ ಗಂಭೀರ ಘಟನೆಯ ಬೆನ್ನಲ್ಲೇ ವಿಮಾನಯಾನ ಸಂಸ್ಥೆಯು ಈ ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಂಡಿದೆ.

Category
ಕರಾವಳಿ ತರಂಗಿಣಿ