ಮಂಗಳೂರು : ಜಪ್ಪಿನಮೊಗರಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 18ನೇ ವರ್ಷದ ಗಣೇಶೋತ್ಸವದ ಅಧ್ಯಕ್ಷರಾಗಿ ಮಾಜಿ ಕಾರ್ಪೊರೇಟರ್ ಜೆ. ನಾಗೇಂದ್ರ ಕುಮಾರ್ ಅವರು ಪುನರ್ ಆಯ್ಕೆಯಾಗಿದ್ದಾರೆ. ಸಮಿತಿಯ ಗೌರವ ಅಧ್ಯಕ್ಷರಾಗಿ ಜೆ. ಅನಿಲ್ ಶೆಟ್ಟಿ ಮನ್ಕುತೋಟಗುತ್ತು ಹಾಗೂ ಕಾರ್ಯಾಧ್ಯಕ್ಷರುಗಳಾಗಿ ಕಾರ್ಪೊರೇಟರ್ ಟಿ. ಪ್ರವೀಣ್ಚಂದ್ರ ಆಳ್ವ, ಉದಯ ಕೋಟಾರಿ ಬಜಾಲ್, ಲ| ಶ್ರೀಧರರಾಜ್ ಶೆಟ್ಟಿ ಕಡೆಕಾರ್, ಸುಧಾಕರ್ ಜೆ. ಕಂಬೆಟ್ಟು, ಲ| ಗಣೇಶ್ ಶೆಟ್ಟಿ ಕಂಬುಕರೆ ಮತ್ತು ಲ| ಗಣೇಶ್ ಸಾಲ್ಯಾನ್ ಅವರುಗಳು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಸುಭಾಷ್ ವಿ. ಅಡಪ್ಪ, ಮುಖ್ಯ ಕಾರ್ಯದರ್ಶಿಗಳಾಗಿ ಬಾಲಕೃಷ್ಣ ಶೆಟ್ಟಿ ಬೀದಿಮನೆ ಹಾಗೂ ಶ್ರೀಮತಿ ಕವಿತಾ ಗಂಗಾಧರ, ಪ್ರಧಾನ ಕೋಶಾಧಿಕಾರಿಯಾಗಿ ಶೈಲೇಶ್ ಭಂಡಾರಿ ತಾದೋಲ್ಯ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರುಗಳಾಗಿ ಜೆ. ಸುರೇಂದ್ರ (ಮಾಜಿ ಕಾರ್ಪೊರೇಟರ್), ನಾಗರಾಜ್ ಬಿ. ವಿ. ಕುಡ್ತಡ್ಕ, ಜಯಂತ್ ಡಿ. ಗಟ್ಟಿ (ನಿವೃತ್ತ ಆದಾಯ ತೆರಿಗೆ ಅಧಿಕಾರಿ), ಶ್ರೀನಿವಾಸ್ ಕೆ. ಎಕ್ಕೂರು, ಸುನಿಲ್ ಪೂಜಾರಿ ತಂದೊಳಿಗೆ, ಅನಿಲ್ ಕೋಟಾರಿ, ಅಶೋಕ್ ರಾವ್ ಕೆ.ಎಸ್.ಆರ್.ಟಿ.ಸಿ., ಜೆ. ಶೇಖರ್ ಸನಿಲ್ ಕಂಬೆಟ್ಟು, ಪುಷ್ಪರಾಜ್ ಶೆಟ್ಟಿ ಕಂಬೆಟ್ಟು, ಶಿವರಾಜ್ ಬಿ. ಅಂಗಡಿಮಾರು, ಶ್ರೀ ಕೃಷ್ಣ ಶೆಟ್ಟಿ ಬಜೆಹಿತ್ಲು, ಅಶೋಕ ಕೋಟ್ಯಾನ್ ಕಂಬೆಟ್ಟು, ಶ್ರೀ ಗಣೇಶ್ ಆಚಾರ್ಯ, ಉಮೇಶ್ ಶೆಟ್ಟಿ ಕಂಬೆಟ್ಟು, ಶ್ರೀಮತಿ ಕವಿತಾ ಕೃಷ್ಣ ಶೆಟ್ಟಿ, ಶ್ರೀಮತಿ ಅಮಿತಾ ಸೀತಾರಾಮ್, ಶ್ರೀಮತಿ ವಿಜಯಾ ಉಜ್ಜೋಡಿ, ಶ್ರೀಮತಿ ಶಾಂತಿ ಶೆಟ್ಟಿ, ಶ್ರೀಮತಿ ಸುಮತಿ ಚಂದ್ರಶೇಖರ್, ಶ್ರೀಮತಿ ಸುಲೋಚನಾ ಮೇಲಾಂಟ, ಶ್ರೀಮತಿ ಪುಷ್ಪಾವತಿ ಹಾಗೂ ಶ್ರೀಮತಿ ಯಶವಂತಿ ರವೀಂದ್ರ ಆಯ್ಕೆಯಾಗಿದ್ದಾರೆ.
ಜೊತೆ ಕಾರ್ಯದರ್ಶಿಗಳಾಗಿ ದೇವರಾಜ್ ಜಪ್ಪು (ಟೈಗರ್ಸ್ ಕ್ಯಾಂಪ್), ಸಂತೋಷ್ ಕುಮಾರ್ ತಂದೊಳಿಗೆ ಮತ್ತು ಶ್ರೀಮತಿ ಶೀತಲ್ ತಂದೊಳಿಗೆ ಹಾಗೂ ಜೊತೆ ಕೋಶಾಧಿಕಾರಿಗಳಾಗಿ ಚಂದ್ರಶೇಖರ ಕಿಲ್ಲೆ ಪಡುಹಿತ್ಲು ಮತ್ತು ಕು| ದೀಪಿಕಾ ಕೇಶವ ಅಂಗಡಿಮಾರು ಆಯ್ಕೆಯಾಗಿದ್ದಾರೆ. ವಿವಿಧ ಸಮಿತಿಯ ಪ್ರಧಾನ ಸಂಚಾಲಕರುಗಳಾಗಿ ಜೆ. ಪ್ರಾಣೇಶ್ ರಾವ್ ತಂದೊಳಿಗೆ, ಸೀತಾರಾಮ್ ಕೆ.ಎಮ್.ಸಿ., ಹರೀಶ್ ಶೆಟ್ಟಿ ತಾದೋಲ್ಯ, ಹರ್ಬರ್ಟ್ ಡಿ'ಸೋಜ ಕಡೆಕಾರ್, ಚಂದ್ರಹಾಸ ಕುಲಾಲ್ ಕಂಬೆಟ್ಟು, ಎನ್. ಸುರೇಶ್ ಶೆಟ್ಟಿ ತಾದೋಲ್ಯ, ಅಮರನಾಥ ಭಂಡಾರಿ ತಾದೋಲ್ಯ, ಕೀರ್ತನ್ ಕುಮಾರ್ ತಂದೊಳಿಗೆ, ಶಿವಾನಂದ ರಾವ್ ಬಜೆಹಿತ್ಲು, ಗಣೇಶ್ ಪೂಜಾರಿ ಜಲ್ಲಿಗುಡ್ಡೆ, ಯೋಗೀಶ್ ರೈ ಬ್ರಹ್ಮರಬೆಟ್ಟು ಹಾಗೂ ಸುದೇಶ್ ಸನಿಲ್ ತಂದೊಳಿಗೆ ಆಯ್ಕೆಯಾಗಿದ್ದಾರೆ. ಗೌರವ ಸಲಹೆಗಾರರು, ಮಹಿಳಾ ಕಾರ್ಯದರ್ಶಿಗಳು ಹಾಗೂ ಉಪ ಸಮಿತಿಗಳ ಸಂಚಾಲಕರು ಸೇರಿದಂತೆ ಒಟ್ಟು 148 ಜನರ ಸಮಿತಿಯನ್ನು ರಚಿಸಲಾಗಿದೆ.