ಮೂಡುಬಿದಿರೆ: ಬೆಂಗಳೂರಿನ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ (ರಿ.) ವತಿಯಿಂದ ನಡೆದ ಕರ್ನಾಟಕ ರಾಜ್ಯ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಆಳ್ವಾಸ್ ಸಂಸ್ಥೆಯ ಅಥ್ಲೀಟ್ಗಳು 15 ಚಿನ್ನ, 8 ಬೆಳ್ಳಿ ಹಾಗೂ 10 ಕಂಚು ಸೇರಿದಂತೆ ಒಟ್ಟು 33 ಪದಕಗಳನ್ನು ಗೆಲ್ಲುವುದರ ಜೊತೆಗೆ 4 ನೂತನ ಕೂಟ ದಾಖಲೆಗಳನ್ನು ನಿರ್ಮಿಸಿದ್ದಾರೆ. ಕೂಟದಲ್ಲಿ ಹೊಸ ದಾಖಲೆ ಬರೆದ ಸಾಧಕರ ಪೈಕಿ 14 ವರ್ಷ ವಯೋಮಿತಿಯ ಬಾಲಕರ ವಿಭಾಗದ ಸುಭಾಷ್ (ಟ್ರಯಥ್ಲಾನ್ ಸಿ), 18 ವರ್ಷ ವಯೋಮಿತಿಯ ಬಾಲಕರ ವಿಭಾಗದ ಸಾಹಿಲ್ (100 ಮೀಟರ್), 16 ವರ್ಷ ವಯೋಮಿತಿಯ ಬಾಲಕರ ವಿಭಾಗದ ರಾಜು (60 ಮೀಟರ್) ಹಾಗೂ 18 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದ ಬಾನವಿ (400 ಮೀಟರ್) ನೂತನ ಕೂಟ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ವಿವಿಧ ವಯೋಮಿತಿ ವಿಭಾಗಗಳಲ್ಲಿ ಕ್ರೀಡಾಪಟುಗಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. 14 ವರ್ಷ ವಯೋಮಿತಿ ವಿಭಾಗದಲ್ಲಿ ಸುಭಾಷ್ (ಟ್ರಯಥ್ಲಾನ್ ಸಿ - ಪ್ರಥಮ) ಹಾಗೂ ಮೋಕ್ಷಿತ್ ಆರ್. ಗೌಡ (ಟ್ರಯಥ್ಲಾನ್ ಬಿ - ದ್ವಿತೀಯ) ಪದಕ ಗೆದ್ದಿದ್ದಾರೆ. 16 ವರ್ಷ ವಯೋಮಿತಿ ವಿಭಾಗದಲ್ಲಿ ರಾಜು (60 ಮೀ - ಪ್ರಥಮ, 80 ಮೀ ಹರ್ಡಲ್ಸ್ - ದ್ವಿತೀಯ), ಕೌಶಿಕ್ ಪಿ. ಶೆಟ್ಟಿಗಾರ್ (80 ಮೀ ಹರ್ಡಲ್ಸ್ - ಪ್ರಥಮ, ಉದ್ದ ಜಿಗಿತ - ತೃತೀಯ), ಮೇಘಾ (600 ಮೀ - ಪ್ರಥಮ), ಹರ್ಷದ್ ಗೌಡ (ಉದ್ದ ಜಿಗಿತ - ದ್ವಿತೀಯ), ಆದರ್ಶ್ (60 ಮೀ - ತೃತೀಯ) ಹಾಗೂ ಅಮೂಲ್ಯ (80 ಮೀ ಹರ್ಡಲ್ಸ್ - ತೃತೀಯ) ಜಯಗಳಿಸಿದ್ದಾರೆ. 18 ವರ್ಷ ವಯೋಮಿತಿ ವಿಭಾಗದಲ್ಲಿ ಸಾಹಿಲ್ (100 ಮೀ - ಪ್ರಥಮ), ಬಾನವಿ (400 ಮೀ - ಪ್ರಥಮ, 200 ಮೀ - ತೃತೀಯ), ಸಮರ್ಥ್ (1000 ಮೀ - ಪ್ರಥಮ), ಜಶ್ವಿನ್ (ಎತ್ತರ ಜಿಗಿತ - ಪ್ರಥಮ), ಹೆಚ್. ಮೈಲಾರಿ (ಚಕ್ರ ಎಸೆತ - ಪ್ರಥಮ), ನಾಗಿಣಿ (1000 ಮೀ - ಪ್ರಥಮ), ಭಾಗೀರಥಿ (3 ಕಿ.ಮೀ ನಡಿಗೆ - ಪ್ರಥಮ), ಆಕಾಶ್ (110 ಮೀ ಹರ್ಡಲ್ಸ್ - ದ್ವಿತೀಯ), ಧನುಷ್ ಚಂದ್ರ (ಚಕ್ರ ಎಸೆತ - ತೃತೀಯ), ಕೃಷ್ಣ (ಜಾವೆಲಿನ್ ಎಸೆತ - ತೃತೀಯ), ನವೀನ್ (ಉದ್ದ ಜಿಗಿತ - ತೃತೀಯ) ಮತ್ತು ಮಲ್ಲಮ್ಮ (3 ಕಿ.ಮೀ ನಡಿಗೆ - ತೃತೀಯ) ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
20 ವರ್ಷ ವಯೋಮಿತಿ ವಿಭಾಗದಲ್ಲಿ ದಯಾನಂದ (400 ಮೀ - ಪ್ರಥಮ), ನೊಯಲ್ ಆರ್. ಪಿ. (ಉದ್ದ ಜಿಗಿತ - ಪ್ರಥಮ), ರೀತುಶ್ರೀ (400 ಮೀ - ಪ್ರಥಮ), ಚರೀಷ್ಮಾ (3000 ಮೀ - ಪ್ರಥಮ, 5000 ಮೀ - ದ್ವಿತೀಯ), ರೂಪೇಶ್ (ಪೋಲೋವಾಲ್ಟ್ - ದ್ವಿತೀಯ), ಮಹಮ್ಮದ್ ಅಬ್ದುಲ್ (ಹ್ಯಾಮರ್ ಎಸೆತ - ದ್ವಿತೀಯ), ನಿತಿನ್ (ಚಕ್ರ ಎಸೆತ - ದ್ವಿತೀಯ) ಹಾಗೂ ನಿರ್ಮಲಾ (100 ಮೀ ಹರ್ಡಲ್ಸ್ ಹಾಗೂ 400 ಮೀ ಹರ್ಡಲ್ಸ್ - ತೃತೀಯ) ಪದಕ ವಿಜೇತರಾಗಿದ್ದಾರೆ. ರಾಜ್ಯ ಮಟ್ಟದ ಈ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ತೋರಿ ಸಂಸ್ಥೆಗೆ ಕೀರ್ತಿ ತಂದ ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.