ಮಂಗಳೂರು: ಜಿಲ್ಲೆಯ ಪತ್ರಕರ್ತರ ಸಂಶೋಧನಾ ಪ್ರವೃತ್ತಿ ಪತ್ರಕರ್ತರವೃತ್ತಿಗೆ ಘನತೆಯನ್ನು ತಂದು ಕೊಟ್ಟಿದೆ ಎಂದು ಮಂಗಳೂರು ಮಂಗಳ ಗಂಗೋತ್ರಿ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್. ಧರ್ಮ ತಿಳಿಸಿದ್ದಾರೆ.
ಅವರು ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ದ.ಕ. ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್‌ಕ್ಲಬ್, ಪತ್ರಿಕಾ ಭವನಾ ಟ್ರಸ್ಟ್ ವತಿಯಿಂದ ನೀಡಲಾಗುವ 2026ನೆ ಸಾಲಿನ ಪ.ಗೋ. ಪ್ರಶಸ್ತಿ ಪ್ರದಾನ ಸಮಾ ರಂಭವನ್ನುದ್ದೇಶಿಸಿ ಮಾತನಾಡುತ್ತಾ, ಪತ್ರಕರ್ತರ ಕೆಲವೊಂದು ವರದಿಗಳು,ಪುಸ್ತಕ ಗಳು ಯಾವುದೇ ಸಂಶೋಧನಾ ಬರಹಗಳಿಗೂ ಕಡಿಮೆಯಿಲ್ಲ ಎಂದು ಅವರು ಶ್ಲಾಘಿಸಿದರು.ಭಾಷಾ ಬೆಳವ ಣಿಗೆಯ ದೃಷ್ಟಿಯಿಂದಲೂ ದ.ಕ. ಜಿಲ್ಲೆಯ ಪತ್ರಕರ್ತರ ಕೊಡುಗೆ ಮಹತ್ವದ್ದಾಗಿದೆ ಎಂದುಪತ್ರಕರ್ತರ ಕನ್ನಡ ಭಾಷಾ ಬಳಕೆ ಅನುಕರಣೀ ಯವಾಗಿದೆ. ಕನ್ನಡ ಭಾಷೆಯನ್ನು ಬೆಳೆಸುವ ಚಳವಳಿಯ ಭಾಗವಾಗಿಯೂ ಇಲ್ಲಿನ ಪತ್ರಕರ್ತರು ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ ಎಂದರು.ಪ್ರಶಸ್ತಿಗೆ ಆಯ್ಕೆಯಾಗಿರುವ ಸಂಶುದ್ದೀನ್ ಅವರ ವಿಶೇಷ ವರದಿಯಲ್ಲೂ ಅವರು ಬಳಸಿರುವ ಭಾಷೆ, ಸರಕಾರವನ್ನು ಎಚ್ಚರಿಸುವ ಉತ್ತಮ ಪ್ರಯತ್ನವಾಗಿದೆ ಎಂದು ಹೇಳಿದ ಅವರು, ಜಿಲ್ಲೆಯ ಕನ್ನಡ ಪತ್ರಕರ ಭಾಷಾ ಪ್ರಯೋಗಗಳು ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿದೆ.ಹೊಸ ಹೊಸ ಶಬ್ಧಗಳ ಪ್ರಯೋಗಗಳನ್ನು ನಾನು ಗಮನಿಸಿದ್ದೇನೆ ಎಂದರು.
ಖಾಸಗೀಕರಣದ ಭರಾಟೆಯ ನಡುವೆ ದ.ಕ. ಜಿಲ್ಲೆಯಲ್ಲಿ ಸಾರ್ವಜನಿಕ ಕ್ಷೇತ್ರದ ಬಗ್ಗೆ ನಿರ್ಲಕ್ಷ್ಯ ಮನೋಭಾವ ಹೆಚ್ಚುತ್ತಿರುವ ಸಂದರ್ಭದಲ್ಲಿಯೂ,ಜಿಲ್ಲೆಯ ಮೂಲ ನಿವಾಸಿಗಳಾದ ಕೊರಗರು ಹಾಗೂ ಅವರಿಗಿಂತಲೂ ತಳಮಟ್ಟದ ಜೀವನ ಸಾಗಿಸುತ್ತಿರುವ ಸಾಕಷ್ಟು ಸಮುದಾಯ, ಕುಟುಂಬಗಳಿಗೆ ಈ ಸರಕಾರಿ ಸಂಸ್ಥೆಗಳು, ಶಿಕ್ಷಣ ಕ್ಷೇತ್ರಗಳು ಇಂದಿಗೂ ಆಶಾಕಿರಣ ವಾಗಿವೆ. ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯುವ ಪ್ರಯತ್ನ ಆಗಬೇಕಾಗಿದೆ ಎಂದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂಶುದ್ದೀನ್, ‘ಈ ಪ್ರಶಸ್ತಿಯು ಜವಾಬ್ಧಾರಿಯನ್ನು ಹೆಚ್ಚಿಸಿದೆ’ ಅವಕಾಶ ವಂಚಿತ ಮೂಲ ನಿವಾಸಿಗಳ ಸಮಸ್ಯೆ ಪರಿಹರಿಸಲು ಸರಕಾರದ ಸಹಾಯ ಅಗತ್ಯವಾಗಿ ಸಿಗಬೇಕಾಗಿದೆ ಎಂದರು. ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿಯವರು ಮಾತನಾಡುತ್ತಾ, ಪದ್ಯಾಣ ಗೋಪಾಲ ಕೃಷ್ಣ (ಪ.ಗೋ.)ಅವರ ಜತೆಗಿನ ತನ್ನ ಒಡನಾಟವನ್ನು ಹಂಚಿ ಕೊಂಡರು. ಸೌಲಭ್ಯಗಳ ಕೊರತೆಗಳಿದ್ದ ಆ ಕಾಲದಲ್ಲಿ ಪ.ಗೋ, ತಮ್ಮ ವೃತ್ತಿಯಲ್ಲಿ ಎಂದಿಗೂ ಜಾತಿ, ಧರ್ಮ, ಭಾಷೆ ಬಗ್ಗೆ ವ್ಯತ್ಯಾಸ ಮಾಡಿದವರಲ್ಲ ಎಂದರು.ಅವರ ಹೆಸರಿನಲ್ಲಿ ಗ್ರಾಮೀಣ ಯುವ ಪತ್ರಕರ್ತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿತರಿಸ ಲಾಗುತ್ತಿರುವ ಪ.ಗೋ ಪ್ರಶಸ್ತಿ ನೀಡುತ್ತಿ ರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್.ರವರು ಮಾತನಾಡುತ್ತಾ, ಪ್ರಯೋಗಶೀಲ ಪತ್ರಕರ್ತರ ರಾಗಿದ್ದ ಪ.ಗೋ. ಅವರು ಜಿಲ್ಲೆ,ರಾಜ್ಯಗಳ ಗಡಿಗಳನ್ನು ಮೀರಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ರೀತಿಯ ಕೊಡುಗೆ ನೀಡಿದವರು ಎಂದರು.
ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್‌ನ ಅಧ್ಯಕ್ಷ ಅನ್ನು ಮಂಗಳೂರು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು.ದ.ಕ. ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಕೋಶಾಧಿಕಾರಿ ವಿಜಯ್ ಕೋಟ್ಯಾನ್ ಪಡು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಕೆ. ಪೂಜಾರಿ ವಂದಿಸಿದರು. ಉಪಾಧ್ಯಕ್ಷ ಮುಹಮ್ಮದ್ ಆರಿಫ್ ಆರಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.