image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದಕ್ಷಿಣ ಭಾರತದಲ್ಲಿ ವಿಸ್ತರಿಸಲಿದೆ ಡೋಲ್ಜೆ ಎಸ್ಟೆಟಿಕಾ ಆರೋಗ್ಯ ಸೇವೆಗಳು

ದಕ್ಷಿಣ ಭಾರತದಲ್ಲಿ ವಿಸ್ತರಿಸಲಿದೆ ಡೋಲ್ಜೆ ಎಸ್ಟೆಟಿಕಾ ಆರೋಗ್ಯ ಸೇವೆಗಳು

ಮಂಗಳೂರು: ಆರೋಗ್ಯ ಕ್ಷೇತ್ರದಲ್ಲೂ ದೀರ್ಘಕಾಲಿಕ ಹಾಗೂ ಅತ್ಯಾಧುನಿಕ ಚಿಕಿತ್ಸೆಗೆ ಹೆಚ್ಚು ಬೇಡಿಕೆ ಇರುವ ಹಿನ್ನೆಲೆಯಲ್ಲಿ, ಕರ್ನಾಟಕದ ಪ್ರಮುಖ ನಗರಗಳಲ್ಲಿ ವಿಸ್ತರಣೆಯಾಗುತ್ತಿರುವ 'ಡೋಲ್ಜೆ ಎಸ್ಟೆಟಿಕಾ' ಸಂಸ್ಥೆಯು ತನ್ನ ಸೇವೆಯನ್ನು ದಕ್ಷಿಣ ಭಾರತದಾದ್ಯಂತ ವಿಸ್ತರಿಸಲು ಮುಂದಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಡೋಲ್ಜೆ ಎಸ್ಟೆಟಿಕಾ ಸಂಸ್ಥೆಯ ನಿರ್ದೇಶಕರಾದ ಜಾರ್ಜ್ ಮ್ಯಾಥ್ಯೂ, "ರೋಗಿಗಳ ಗುಣಮಟ್ಟ ಮತ್ತು ಸುರಕ್ಷತೆ ಹಾಗೂ ಸಂಸ್ಥೆಯ ವೈದ್ಯಕೀಯ ಪ್ರೋಟೋಕಾಲ್ ಗಳ ಸಮರ್ಪಕ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಂದು ಕೇಂದ್ರದ ಕಾರ್ಯನಿರ್ವಹಣೆ ಸಂಪೂರ್ಣವಾಗಿ ಡೋಲ್ಜೆ ಎಸ್ಟೆಟಿಕಾ ಸಂಸ್ಥೆಯ ಅಧೀನದಲ್ಲಿರುತ್ತದೆ. 'ಫ್ರಾಂಚೈಸ್ ಓನ್ಡ್ - ಫ್ರಾಂಚೈಸ್ ಆಪರೇಟೆಡ್' (FOFO) ಹಾಗೂ 'ಕಂಪನಿ ಓನ್ಡ್ - ಫ್ರಾಂಚೈಸ್ ಆಪರೇಟೆಡ್' (COFO) ಮಾದರಿಗಳನ್ನು ನಾವು ಉದ್ದೇಶಪೂರ್ವಕವಾಗಿ ಅನುಸರಿಸುತ್ತಿಲ್ಲ. ಬದಲಿಗೆ, ಕೇಂದ್ರಿಯ ನಿರ್ವಹಣೆಯ ಮೂಲಕವೇ ಸುರಕ್ಷಿತ, ಗುಣಮಟ್ಟದ ಹಾಗೂ ವಿಶ್ವಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ಸಾಧ್ಯ" ಎಂದರು.

ಸಂಸ್ಥೆಯ ಮೊದಲ ಹಂತದ ವಿಸ್ತರಣೆಯು ದಕ್ಷಿಣ ಭಾರತವನ್ನು ಕೇಂದ್ರೀಕರಿಸಿದ್ದು, ಮಂಗಳೂರು ಕೇಂದ್ರದ ಬಳಿಕ ಬೆಂಗಳೂರು, ಮೈಸೂರು, ಕೊಯಮತ್ತೂರು, ಚೆನ್ನೈ, ತಿರುವನಂತಪುರ, ಪುದುಚೇರಿ, ಕೊಚ್ಚಿ, ಕೋಝಿಕ್ಕೋಡ್, ತಿರುವನಂತಪುರಂ, ಪಾಲಾ, ಚಿತ್ತೂರು ಹಾಗೂ ಪೆರಿಮಣ್ಣ ನಗರಗಳಲ್ಲಿ ಹೊಸ ಕೇಂದ್ರಗಳನ್ನು ಆರಂಭಿಸುವ ಯೋಜನೆಯನ್ನು ಹೊಂದಿದೆ. ಇದರೊಂದಿಗೆ ಆರೋಗ್ಯ ಕುರಿತು ಮುನ್ನೆಚ್ಚರಿಕೆಯ ಜಾಗೃತಿ ಕಾರ್ಯಕ್ರಮಗಳು, ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಮಹಿಳಾ ಆರೋಗ್ಯ ಕಾರ್ಯಕ್ರಮಗಳು ಹಾಗೂ ಶಾಲಾ-ಕಾಲೇಜು ಕಾರ್ಪೊರೇಟ್ ಸಂಸ್ಥೆಗಳಿಗೆ ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ವೈದ್ಯಕೀಯ ಪ್ರವಾಸೋದ್ಯಮ (Medical Value Travel) ಮತ್ತು  ಆರ್ಥಿಕ ಅಭಿವೃದ್ಧಿಗೂ ಸಂಸ್ಥೆ ತನ್ನ ಕೊಡುಗೆಯನ್ನು ನೀಡಲಿದೆ.

ಡೋಲ್ಜೆ ಎಸ್ಟೆಟಿಕಾ ವೈದ್ಯರ ನೇತೃತ್ವದಲ್ಲಿ ಸುದೀರ್ಘ ಆರೋಗ್ಯಪುನಶ್ಚೇತನ ಮತ್ತು ವೈದ್ಯಕೀಯ ಸೌಂದರ್ಯಚಿಕಿತ್ಸಾ ಸಂಸ್ಥೆಯಾಗಿದ್ದು, ಮೊದಲ ಹಂತದಲ್ಲಿ ದಕ್ಷಿಣ ಭಾರತದಾದ್ಯಂತ ತನ್ನ ಸೇವೆಗಳನ್ನು ವಿಸ್ತರಿಸುತ್ತಿದೆ ಎಂದರು.

Category
ಕರಾವಳಿ ತರಂಗಿಣಿ