image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಳ್ವಾಸ್ ಪ್ರಗತಿ-2026: ಗಾಲಿಕುರ್ಚಿಯಲ್ಲೇ ಬಂದು ಉದ್ಯೋಗ ಗಿಟ್ಟಿಸಿಕೊಂಡ ಭಾಗ್ಯಶ್ರೀ ಕುಲಾಲ್

ಆಳ್ವಾಸ್ ಪ್ರಗತಿ-2026: ಗಾಲಿಕುರ್ಚಿಯಲ್ಲೇ ಬಂದು ಉದ್ಯೋಗ ಗಿಟ್ಟಿಸಿಕೊಂಡ ಭಾಗ್ಯಶ್ರೀ ಕುಲಾಲ್

ಮೂಡುಬಿದಿರೆ: ಕಳೆದ ಒಂದು ವರ್ಷದಿಂದ ಸೂಕ್ತ ಉದ್ಯೋಗಕ್ಕಾಗಿ ಕಾಯುತ್ತಿದ್ದ ದೈಹಿಕ ವಿಶೇಷಚೇತನ ಯುವತಿ ಭಾಗ್ಯಶ್ರೀ ಕುಲಾಲ್ ಅವರ ಬದುಕಿಗೆ 'ಆಳ್ವಾಸ್ ಪ್ರಗತಿ-2026' ಬೃಹತ್ ಉದ್ಯೋಗ ಮೇಳ ಹೊಸ ಆಶಾದಾಯಕ ತಿರುವು ನೀಡಿದೆ. ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಎಂ.ಕಾಂ ಪದವಿ ಪಡೆದಿದ್ದ ಭಾಗ್ಯಶ್ರೀ, ದೈಹಿಕ ಸವಾಲುಗಳನ್ನು ಮೆಟ್ಟಿ ನಿಂತು ತಮ್ಮ ಸಹೋದರನ ನೆರವಿನಿಂದ ಗಾಲಿಕುರ್ಚಿಯಲ್ಲೇ ಉದ್ಯೋಗ ಮೇಳಕ್ಕೆ ಆಗಮಿಸಿದ್ದರು. ಮೇಳದಲ್ಲಿ ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ ಅವರು, ಮೈಸೂರಿನ ಪ್ರಸಿದ್ಧ 'ರೆಡ್ಡೀಸ್ ಫೌಂಡೇಷನ್'‌ನಲ್ಲಿ ಅಕೌಂಟೆಂಟ್ ಹುದ್ದೆಗೆ ಆಯ್ಕೆಯಾಗಿದ್ದಾರೆ.

 "ಕಳೆದ ಒಂದು ವರ್ಷದಿಂದ ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದೆ. ಆಳ್ವಾಸ್ ಪ್ರಗತಿಗೆ ಬಂದು ಸಂದರ್ಶನ ಎದುರಿಸಿದ ಬಳಿಕ ನನಗೆ ಈ ಕೆಲಸ ದೊರೆತಿದೆ. ಮೈಸೂರಿಗೆ ತೆರಳಿ ಕರ್ತವ್ಯ ನಿರ್ವಹಿಸಲು ಸಿದ್ಧಳಾಗಿದ್ದೇನೆ," ಎಂದು ಭಾಗ್ಯಶ್ರೀ ಹರ್ಷ ವ್ಯಕ್ತಪಡಿಸಿದ್ದಾರೆ.

 

Category
ಕರಾವಳಿ ತರಂಗಿಣಿ