image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉಜಿರೆ ರುಡ್‌ಸೆಟ್‌ ಸಂಸ್ಥೆಯಲ್ಲಿ ಉಚಿತ ಅಣಬೆ ಬೇಸಾಯ ತರಬೇತಿ

ಉಜಿರೆ ರುಡ್‌ಸೆಟ್‌ ಸಂಸ್ಥೆಯಲ್ಲಿ ಉಚಿತ ಅಣಬೆ ಬೇಸಾಯ ತರಬೇತಿ

ಉಜಿರೆ : ಉಜಿರೆಯ ಸಿದ್ಧವನದಲ್ಲಿರುವ ಪ್ರಸಿದ್ಧ ರುಡ್‌ಸೆಟ್‌ ಸಂಸ್ಥೆಯು ಸಾರ್ವಜನಿಕರಿಗಾಗಿ 12 ದಿನಗಳ ಉಚಿತ ಅಣಬೆ ಬೇಸಾಯ ತರಬೇತಿ ಶಿಬಿರವನ್ನು ಆಯೋಜಿಸಿದೆ. ಈ ತರಬೇತಿಯು 2026ರ ಆಗಸ್ಟ್ 04 ರಿಂದ ಆಗಸ್ಟ್ 15 ರವರೆಗೆ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 9:30 ರಿಂದ ಸಂಜೆ 5:30 ರವರೆಗೆ ತರಬೇತಿ ತರಗತಿಗಳು ನಡೆಯಲಿವೆ.

18 ರಿಂದ 50 ವರ್ಷ ವಯೋಮಿತಿಯೊಳಗಿನ ಆಸಕ್ತ ಅಭ್ಯರ್ಥಿಗಳು ಈ ತರಬೇತಿಯಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ. ತರಬೇತಿಗೆ ಆಗಮಿಸುವ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸ್ಥಳೀಯರು ಪ್ರತಿದಿನ ಮನೆಗೆ ಹೋಗಿ ಬರಲು ಅವಕಾಶವಿರುತ್ತದೆ.
ತರಬೇತಿಯಲ್ಲಿ ಭಾಗವಹಿಸಲು ಬಯಸುವವರು ಗೂಗಲ್ ಫಾರ್ಮ್ (https://forms.gle/9LUE1UvHMAv21vRS7) ಲಿಂಕ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆಗಳಾದ 6364561982, 8296770307, 9980885900, 9448348569, 8861514706, 08256-236404 ಅಥವಾ ಅಧಿಕೃತ ವೆಬ್‌ಸೈಟ್ www.rudsetujire.com ಅನ್ನು ಸಂಪರ್ಕಿಸಬಹುದಾಗಿದೆ.

Category
ಕರಾವಳಿ ತರಂಗಿಣಿ