image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಮೆರಿಕ ಸಂಸತ್ತಿನ ಇತಿಹಾಸದಲ್ಲಿ ಸಚಿವ ಡಾ. ಯು. ಟಿ. ಖಾದರ್ ಸಾಧನೆ ದಾಖಲು

ಅಮೆರಿಕ ಸಂಸತ್ತಿನ ಇತಿಹಾಸದಲ್ಲಿ ಸಚಿವ ಡಾ. ಯು. ಟಿ. ಖಾದರ್ ಸಾಧನೆ ದಾಖಲು

ವಾಷಿಂಗ್ಟನ್ ಡಿ.ಸಿ/ ಮಂಗಳೂರು : ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಯು. ಟಿ. ಖಾದರ್ ಫರೀದ್ ಅವರು ಅಮೆರಿಕದ ಸಂಸತ್ತಿನ ಇತಿಹಾಸದಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ದಾಖಲಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದ ವಿಶೇಷ ಗೌರವಕ್ಕೆ ಭಾಜನರಾಗಿದ್ದಾರೆ. ಅವರ ಸಾರ್ವಜನಿಕ ಸೇವೆ ಹಾಗೂ ನಾಯಕತ್ವದ ಸಾಧನೆಗಳನ್ನು ಅಧಿಕೃತವಾಗಿ ಗುರುತಿಸಿ ನೀಡಲಾಗುವ ಪ್ರತಿಷ್ಠಿತ "ಫಾರ್ ದಿ ಕಾಂಗ್ರೆಸ್ಸಿನಲ್ ರೆಕಾರ್ಡ್" ದಾಖಲೆಯನ್ನು ಅವರಿಗೆ ಗೌರವಪೂರ್ವಕವಾಗಿ ಪ್ರದಾನ ಮಾಡಲಾಗಿದೆ.

ಅಮೆರಿಕದ ಹೌಸ್ ಫಾರಿನ್ ಅಫೇರ್ಸ್ ಸಮಿತಿಯ ರ್ಯಾಂಕಿಂಗ್ ಸದಸ್ಯ, ಪ್ರಸಿದ್ಧ ನಾಗರಿಕ ಹಕ್ಕುಗಳ ಹೋರಾಟಗಾರ ರೆವರೆಂಡ್ ಜೆಸ್ಸಿ ಜಾಕ್ಸನ್ ಅವರ ಪುತ್ರ ಹಾಗೂ ಅಮೆರಿಕದ ರಾಜಕೀಯದಲ್ಲಿ 'ಭವಿಷ್ಯದ ಬರಾಕ್ ಒಬಾಮಾ' ಎಂದೇ ಗುರುತಿಸಲ್ಪಡುವ ಸಂಸದ ಜೊನಾಥನ್ ಜಾಕ್ಸನ್ ಅವರು ಈ ಗೌರವವನ್ನು ಸಚಿವರಿಗೆ ಹಸ್ತಾಂತರಿಸಿದರು. ಈ ಐತಿಹಾಸಿಕ ದಾಖಲೆಯು ಅಮೆರಿಕ ಸಂಸತ್ತಿನ ಆರ್ಚಿವ್ಸ್‌ನಲ್ಲಿ ಅಧಿಕೃತವಾಗಿ ದಾಖಲಾಗಿದ್ದು, ಅಮೆರಿಕದ ಸಂಸತ್ತಿನ ಗ್ರಂಥಾಲಯದಲ್ಲಿ (ಲೈಬ್ರರಿ ಆಫ್ ಕಾಂಗ್ರೆಸ್) ಶಾಶ್ವತವಾಗಿ ಸಂರಕ್ಷಿಸಲ್ಪಡಲಿದೆ.

ಇದರೊಂದಿಗೆ, ಜುಲೈ 28ರಂದು ವಾಷಿಂಗ್ಟನ್ ಡಿ.ಸಿ.ಯ ಕ್ಯಾಪಿಟಲ್ ಹಿಲ್‌ನ ಸೆಂಟ್ರಲ್ ರೋಟುಂಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತ್ಯುನ್ನತ "ಕಾಂಗ್ರೆಸ್ಸಿನಲ್ ಚಾಲೆಂಜ್ ಮೆಡಲಿಯನ್" ಅನ್ನು ಸಹ ಡಾ. ಯು. ಟಿ. ಖಾದರ್ ಫರೀದ್ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಈ ಸ್ಮರಣೀಯ ಹಾಗೂ ಐತಿಹಾಸಿಕ ಕ್ಷಣಕ್ಕೆ ಅಮೆರಿಕ ಸಂಸದ ಜೊನಾಥನ್ ಜಾಕ್ಸನ್ ಅವರ ಹಿರಿಯ ಸಲಹೆಗಾರರಾದ ಡಾ. ವಿಜಯ್ ಜಿ. ಪ್ರಭಾಕರ್ ಮತ್ತು AMEC USA ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ನವೀನ್‌ಚಂದ್ರ ಕರ್ಣ ಅವರು ಪ್ರತ್ಯಕ್ಷ ಸಾಕ್ಷಿಯಾದರು.

Category
ಕರಾವಳಿ ತರಂಗಿಣಿ