ಮಂಗಳೂರು: ಶ್ರೀ ಕ್ಷೇತ್ರ ನೆಲ್ಲಿತೀರ್ಥ ಸೋಮನಾಥೇಶ್ವರ ಗುಹಾಲಯವು ಕರ್ನಾಟಕದ ಅತಿದೊಡ್ಡ ಗುಹಾ ದೇವಾಲಯಗಳಲ್ಲಿ ಒಂದಾಗಿದ್ದು, ಇದು ಮಂಗಳೂರು ನಗರದಿಂದ 30 ಕಿ.ಮೀ ದೂರ ಕೊಂಪದವು ಗ್ರಾಮದ ನೀರುಡೆಯಲ್ಲಿದೆ.
ದೇವಾಲಯದ ಪಕ್ಕದಲ್ಲಿ ಸುಂದರವಾದ ಗುಹೆ ಇದೆ. ಅದರೊಳಗೆ 'ನೆಲ್ಲಿತೀರ್ಥ' ಎಂಬ ಪವಿತ್ರ ಕೊಳ ಮತ್ತು 'ಜಾಬಾಲೇಶ್ವರ' ಎಂಬ ಶಿವಲಿಂಗವಿದೆ. ಜನರು ಗುಹೆಯನ್ನು ಪ್ರವೇಶಿಸಿ ಪವಿತ್ರ ತೀರ್ಥ ಸ್ನಾನ ಮಾಡಲು ಸುಮಾರು 200 ಮೀಟರ್ ಒಳಗೆ ಮುಂದುವರಿಯುತ್ತಾರೆ.
ಪ್ರತಿ ವರ್ಷ ತುಲಾ ಸಂಕ್ರಮಣದ ಶುಭ ದಿನದಿಂದ 'ಮೇಷ ಸಂಕ್ರಮಣ'ದವರೆಗೆ (ಸಾಮಾನ್ಯವಾಗಿ ಅಕ್ಟೋಬರ್ 17 ರಿಂದ ಏಪ್ರಿಲ್ 14 ರವರೆಗೆ) ಗುಹೆಗೆ ಪ್ರವೇಶಿಸಲು ಮತ್ತು 'ತೀರ್ಥ ಸ್ನಾನ' ಮಾಡಲು ಜನರಿಗೆ ಅವಕಾಶವಿದೆ. ಈ ವರ್ಷದ, ಸಮಾರಂಭವು 2024 ರ ಅಕ್ಟೋಬರ್ 17 ರಿಂದ ಪ್ರಾರಂಭವಾಗುತ್ತದೆ ಎಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಶ್ರೀ ಭುವನಾಭಿರಾಮ ಉಡುಪ, ಪ್ರಧಾನ ಸಂಪಾದಕರು, ಯುಗಪುರುಷ, ಕಿನ್ನಿಗೋಳಿ, ಶ್ರೀ ಪ್ರಸನ್ನ ಭಟ್, ನೆಲ್ಲಿತೀರ್ಥ, ಶ್ರೀ ದೀಪ್ ಕಿರಣ್, ಕರಂಬಾರ್ ಉಪಸ್ಥಿತಿಯಿದ್ದರು.