ಮಂಗಳೂರು : ನಗರದ ಶ್ರೀ ಗಣೇಶೋತ್ಸವ ಸಮಿತಿ (ರಿ.) ಕಣ್ಣೂರು ಇದರ ವತಿಯಿಂದ ಆಯೋಜಿಸಲಾಗುತ್ತಿರುವ 48 ನೇ ವರ್ಷದ ಕಣ್ಣೂರು ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿಂದ ಜರುಗಿತು. ಈ ಬಾರಿಯ ಕಣ್ಣೂರು ಗಣೇಶೋತ್ಸವವು ದಿನಾಂಕ 14.09.2026 ರಿಂದ 16.09.2026 ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ಶ್ರೀ ನಿತಿನ್ ಕಣ್ಣೂರು, ಗೌರವಾಧ್ಯಕ್ಷರಾದ ಶ್ರೀ ನಾಗೇಶ್ ಕೋಟ್ಯಾನ್, ಉಪಾಧ್ಯಕ್ಷರಾದ ಶ್ರೀ ಸುಧಾಕರ್ ಆಚಾರ್ಯ ಹಾಗೂ ಶ್ರೀ ಸೀತಾರಾಮ ಗಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀ ದೀಪಕ್, ಜೊತೆ ಕಾರ್ಯದರ್ಶಿಗಳಾದ ಶ್ರೀ ಅಮನ್ ಅಂಚನ್ ಹಾಗೂ ಶ್ರೀ ಪ್ರತೀಕ್, ಕೋಶಾಧಿಕಾರಿ ಶ್ರೀ ರಾಜೇಶ್ ಕುಲಾಲ್, ಕ್ರೀಡಾ ಕಾರ್ಯದರ್ಶಿಗಳಾದ ಶ್ರೀ ನಿಖಿತ್ ಕೊಟ್ಟಾರಿ ಹಾಗೂ ಶ್ರೀ ಜೀವನ್ ಶೆಟ್ಟಿ, ಮತ್ತು ಸಂಘಟನಾ ಕಾರ್ಯದರ್ಶಿ ಶ್ರೀ ರಾಜೇಶ್ ಕೋಟ್ಯಾನ್ ಉಪಸ್ಥಿತರಿದ್ದರು.
ಅಲ್ಲದೆ, ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ವಿವೇಕ್ ಸುವರ್ಣ, ಶ್ರೀ ಸುರೇಶ್ ಶೆಟ್ಟಿ, ಶ್ರೀ ಬಾಬು ಗಟ್ಟಿ, ಶ್ರೀ ಯುವರಾಜ್ ಹಾಗೂ ಹಿರಿಯ ಸದಸ್ಯರಾದ ಶ್ರೀ ನಾರಾಯಣ ಅಂಚನ್, ಶ್ರೀ ನೀಲಯ್ಯ ಕೋಟ್ಯಾನ್, ಶ್ರೀ ಸಂಜೀವ ಕೊಳ್ತಾಡಿ, ಶ್ರೀ ಉಮೇಶ್ ಕೊಳ್ತಾಡಿ, ಶ್ರೀ ದಿನೇಶ್ ಸುವರ್ಣ ಸೇರಿದಂತೆ ಸಮಿತಿಯ ಸರ್ವ ಸದಸ್ಯರು ಭಾಗವಹಿಸಿದ್ದರು.