image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿದ ರೋಹನ್ ಕಾರ್ಪೊರೇಷನ್

ಮಂಗಳೂರಿನಲ್ಲಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿದ ರೋಹನ್ ಕಾರ್ಪೊರೇಷನ್

ಮಂಗಳೂರು: ಬಿಜೈನ ರೋಹನ್ ಸಿಟಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ರೋಹನ್ ಕಾರ್ಪೊರೇಷನ್ ವತಿಯಿಂದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು, ಮಾಧ್ಯಮದವರು, ಆಹ್ವಾನಿತ ಅತಿಥಿಗಳು ಹಾಗೂ ಕಂಪನಿಯ ಉದ್ಯೋಗಿಗಳು ಭಾಗವಹಿಸಿದ್ದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ರೋಹನ್ ಕಾರ್ಪೊರೇಷನ್‌ನ ನಿರ್ದೇಶಕರಾದ ಶ್ರೀ ಡಿಯೋನ್ ಮೊಂಟೆರೋ ಮತ್ತು ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಸುಮನಾ ಅವರು ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಮ್ಮ ಅತ್ಯುತ್ತಮ ಸಾಧನೆಗಳ ಮೂಲಕ ಕರಾವಳಿ ಭಾಗಕ್ಕೆ ರಾಷ್ಟ್ರೀಯ ಮಟ್ಟದ ಹೆಮ್ಮೆ ತಂದ ಪ್ರಶಸ್ತಿ ವಿಜೇತರನ್ನು ಅವರು ಅಭಿನಂದಿಸಿ ಗೌರವಿಸಿದರು.
ಸನ್ಮಾನಿತರಲ್ಲಿ 'ಮಿಥ್ಯಾ' ಚಿತ್ರಕ್ಕಾಗಿ ಅತ್ಯುತ್ತಮ ಸಹನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ರೂಪಶ್ರೀ ವರ್ಕಾಡಿ, 'ಮಿಥ್ಯಾ' ಚಿತ್ರಕ್ಕಾಗಿ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿ ಪಡೆದ ಮಾಸ್ಟರ್ ಆತಿಶ್ ಎಸ್. ಶೆಟ್ಟಿ,  ಸಿನೆಮಾ ಕುರಿತ ಅತ್ಯುತ್ತಮ ಪುಸ್ತಕ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಡಾ. ಪ್ರದೀಪ್ ಕೆಂಚನೂರು, ಹಾಗೂ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ತುಳು ಚಲನಚಿತ್ರವೆಂದು ಗುರುತಿಸಲ್ಪಟ್ಟ 'ಇಂಬು' ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರಾದ ಶಿವಧ್ವಜ್ ಶೆಟ್ಟಿ ಮತ್ತು ಪ್ರಶಾಂತ್ ರೈ ಉಪಸ್ಥಿತರಿದ್ದರು.

ಅತಿಥಿಗಳು ರೋಹನ್  ಚಲನಚಿತ್ರ ಮತ್ತು ಸಾಹಿತ್ಯ ಕ್ಷೇತ್ರದ ತಮ್ಮ ಪಯಣದ ಹಿಂದಿನ ಪರಿಶ್ರಮ, ಛಲ ಮತ್ತು ಅನುಭವಗಳನ್ನು ಅವರು ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಯೋನ್ ಮೊಂಟೆರೋ ಅವರು, ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಸಲ್ಲಿಸಿ, ಅವರ ಸಾಧನೆಯು ಈ ಪ್ರದೇಶಕ್ಕೆ ಅಪಾರ ಹೆಮ್ಮೆಯನ್ನು ತಂದಿದೆ ಎಂದರು. ಇಂತಹ ಸಾಧನೆಗಳನ್ನು ಗುರುತಿಸುವುದು ರೋಹನ್ ಕಾರ್ಪೊರೇಷನ್‌ಗೆ ದೊರೆತ ಸೌಭಾಗ್ಯ ಎಂದು ನುಡಿದ ಅವರು, ಇವರ ಯಶಸ್ಸು ಈ ಭಾಗದ ಮತ್ತಷ್ಟು ಆಕಾಂಕ್ಷಿ ಕಲಾವಿದರು, ಚಲನಚಿತ್ರ ನಿರ್ಮಾಪಕರು ಮತ್ತು ಕಥೆಗಾರರಿಗೆ ಸ್ಫೂರ್ತಿ ನೀಡಲಿದೆ ಎಂದು ಆಶಿಸಿದರು.

ಈ ಕಾರ್ಯಕ್ರಮವನ್ನು ಲವಿತಾ ಡಿಸೋಜಾ ನಿರೂಪಿಸಿದರು. ಸನ್ಮಾನ ಸಮಾರಂಭದೊಂದಿಗೆ ಮುಕ್ತಾಯಗೊಂಡ ಈ ಕಾರ್ಯಕ್ರಮವು ವಂದನಾರ್ಪಣೆಯೊಂದಿಗೆ ಸಂಪೂರ್ಣಗೊಂಡಿತು.

Category
ಕರಾವಳಿ ತರಂಗಿಣಿ