ಉಜಿರೆ : ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಸಿದ್ಧವನದಲ್ಲಿರುವ ಪ್ರಸಿದ್ಧ ರುಡ್‌ಸೆಟ್ (RUDSET) ಸಂಸ್ಥೆಯು ಉದ್ಯೋಗಾಕಾಂಕ್ಷಿಗಳಿಗಾಗಿ 31 ದಿನಗಳ ಉಚಿತ ಛಾಯಾಗ್ರಹಣ (ಫೋಟೋಗ್ರಫಿ) ಮತ್ತು ವೀಡಿಯೋಗ್ರಫಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ತರಬೇತಿ ಶಿಬಿರವು 2026ರ ಜುಲೈ 28ರಿಂದ ಆಗಸ್ಟ್ 27ರವರೆಗೆ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 9:30ರಿಂದ ಸಂಜೆ 5:30ರವರೆಗೆ ತರಗತಿಗಳು ಜರುಗಲಿವೆ. 18ರಿಂದ 50 ವರ್ಷ ವಯೋಮಿತಿಯ ಆಸಕ್ತ ಪುರುಷ ಮತ್ತು ಮಹಿಳೆಯರು ಈ ಉಚಿತ ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ದೂರದ ಊರುಗಳಿಂದ ಬರುವ ಅಭ್ಯರ್ಥಿಗಳಿಗೆ ಉಚಿತ ವಸತಿ ಮತ್ತು ಊಟದ ಸೌಲಭ್ಯವನ್ನು ಸಂಸ್ಥೆಯ ವತಿಯಿಂದಲೇ ಕಲ್ಪಿಸಲಾಗುತ್ತದೆ. ಇಚ್ಛೆಯಿದ್ದಲ್ಲಿ ಪ್ರತಿದಿನ ಮನೆಗೆ ಹೋಗಿ ಬರಲು ಸಹ ಅವಕಾಶವಿರುತ್ತದೆ.
ಆಸಕ್ತರು ಆನ್‌ಲೈನ್ ಗೂಗಲ್ ಫಾರ್ಮ್ ಲಿಂಕ್ (https://forms.gle/9LUE1UvHMAv21vRS7) ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿ ಹಾಗೂ ಉದ್ಯೋಗ ತರಬೇತಿ ವಿವರಗಳಿಗಾಗಿ 6364561982, 8296770307, 9980885900, 9448348569, 8861514706, 9591044014, 9902594791 ಅಥವಾ ಲ್ಯಾಂಡ್‌ಲೈನ್ ಸಂಖ್ಯೆ 08256-236404 ಸಂಪರ್ಕಿಸಬಹುದು. ಸಂಸ್ಥೆಯ ಅಧಿಕೃತ ವೆಬ್‌ಸೈಟ್ www.rudsetujire.com ಮೂಲಕವೂ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.