ಉಜಿರೆ : ಇಲ್ಲಿನ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಕಲಾ ವಿಭಾಗದ ನೂತನ ಡೀನ್ ಆಗಿ ಡಾ. ಬೋಜಮ್ಮ ಕೆ. ಎನ್. ಅವರು ನೇಮಕಗೊಂಡಿದ್ದಾರೆ. ಬೋಧನಾ ಕ್ಷೇತ್ರದಲ್ಲಿ 33 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಡಾ. ಬೋಜಮ್ಮ ಅವರು, ಕಳೆದ 21 ವರ್ಷಗಳಿಂದ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ 5 ವರ್ಷಗಳಿಂದ ಸಂಸ್ಥೆಯ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ತಮ್ಮ ಅತ್ಯುತ್ತಮ ಬೋಧನಾ ಶೈಲಿ ಹಾಗೂ ವಿದ್ಯಾರ್ಥಿ ಸ್ನೇಹಿ ವ್ಯಕ್ತಿತ್ವದಿಂದ ಅಪಾರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಈ ಸುದೀರ್ಘ ಶೈಕ್ಷಣಿಕ ಅನುಭವ ಹಾಗೂ ಸೇವೆಯನ್ನು ಗುರುತಿಸಿ, ಇದೀಗ ಕಲಾ ವಿಭಾಗದ ನೂತನ ಡೀನ್ ಹೊಣೆಗಾರಿಕೆಯನ್ನು ನೀಡಲಾಗಿದೆ.