ಮಂಗಳೂರು: ಎಸ್‌ಐಆರ್ (SIR) ಮಹಾ ಅಭಿಯಾನದ ಪ್ರಯುಕ್ತ ಮಂಗಳೂರು ನಗರ ದಕ್ಷಿಣ ಮಂಡಲದ ವಿವಿಧೆಡೆ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಕ್ಷಿಣ ಮಹಾಶಕ್ತಿ ಕೇಂದ್ರದ ಬಜಾಲ್ 53ನೇ ವಾರ್ಡಿನ ಬೂತ್ ಸಂಖ್ಯೆ 208 ಹಾಗೂ 209ಕ್ಕೆ ಭೇಟಿ ನೀಡಿದ ಶಾಸಕರು ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದರು. ಮತದಾರರಿಗೆ ಎನ್ಯುಮರೇಷನ್ ಫಾರಂಗಳನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಯಾವುದೇ ಸಂದೇಹ ಅಥವಾ ಸಮಸ್ಯೆಗಳಿದ್ದಲ್ಲಿ ಪಕ್ಷದ ಏಜೆಂಟರ ಸಹಾಯವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಎಲ್ಲರ ಮತಗಳು ಅತ್ಯಂತ ಅಮೂಲ್ಯವಾಗಿದ್ದು, ಯಾವೊಬ್ಬ ಅರ್ಹ ಮತದಾರರೂ ಸಹ ಮತದಾರರ ಪಟ್ಟಿಯಿಂದ ಹೊರಗುಳಿಯುವಂತಾಗಬಾರದು ಎಂದು ಸಾರ್ವಜನಿಕರಲ್ಲಿ ಶಾಸಕರು ವಿಶೇಷ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಪ್ರವೀಣ್ ನಿಡ್ಡೇಲ್, ಚಂದ್ರಶೇಖರ್ ಬಜಾಲ್, ಪ್ರೀತೇಶ್, ಪ್ರೀತಮ್ ಅಂಚನ್, ರಾಹುಲ್ ಬೋಳೂರು, ಶಿವಾಜಿ ರಾವ್, ಮೋಹಿನಿ, ಅಜಿತ್, ಅಜಯ್ ಸೇರಿದಂತೆ ವಿವಿಧ ಪ್ರಮುಖರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.