ಮಂಗಳೂರು: ಜುಲೈ1969 19ರಂದು ದೇಶದ 14 ಪ್ರಮುಖ ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಈ ಐತಿಹಾಸಿಕ ನಿರ್ಧಾರವು ದೇಶದ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯನ್ನು ತಂದಿತು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು "ವರ್ಗ ಬ್ಯಾಂಕಿಂಗ್'ನಿಂದ "ಜನಸಾಮಾನ್ಯರ ಬ್ಯಾಂಕಿಂಗ್" ಆಗಿ ಪರಿವರ್ತಿಸಿತು ಎಂದು ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟದ ಹಿರಿಯ ಉಪಾಧ್ಯಕ್ಷರಾದ ಶಿವರಾಮ ಆಳ್ವ ತಿಳಿಸಿದ್ದಾರೆ.
ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟ ದ ವತಿಯಿಂದ ಬ್ಯಾಂಕ್ ರಾಷ್ಟ್ರೀಕರಣದ ದಿನದ 58ನೆ ವರ್ಷಾರಣೆಯ ಅಂಗವಾಗಿ ಬಜ್ಪೆ ಹಳೆ ವಿಮಾನ ನಿಲ್ದಾಣ ರಸ್ತೆಯ ಬಳಿ ಇರುವ ವಿಜಯ ಮಂಗಳ ಲೇಔಟ್ ನಲ್ಲಿ ರವಿವಾರ 'ಭೂಮಿಯನ್ನು ಉಳಿಸಲು ಸಸಿ ನೆಡಿ' ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ,
1980ರ ಏಪ್ರಿಲ್ 15ರಂದು ಇನ್ನೂ ಆರು ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಗೊಳಿಸುವ ಮೂಲಕ ಬ್ಯಾಂಕ್ ರಾಷ್ಟ್ರೀಕರಣದ ಉದ್ದೇಶಗಳನ್ನು ಮತ್ತಷ್ಟು ಬಲಪಡಿಸಲಾಯಿತು.ಬ್ಯಾಂಕ್ ನೌಕರರು ಮತ್ತು ನಿವೃತ್ತರು ಪ್ರತಿವರ್ಷ ಜುಲೈ 19ರಂದು ಬ್ಯಾಂಕ್ ರಾಷ್ಟ್ರೀಕರಣ ದಿನವನ್ನು ರ್ಯಾಲಿ ಹಾಗೂ ಸಾರ್ವಜನಿಕ ಸಭೆಗಳನ್ನು ಆಯೋಜಿ ಸುವ ಮೂಲಕ ಆಚರಿಸುತ್ತಾ ಬಂದಿದ್ದಾರೆ. ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರಾದ ನಾವು, ಬ್ಯಾಂಕ್ ರಾಷ್ಟ್ರೀಕರಣದ ಉದಾತ್ತ ಗುರಿಗಳನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದೇವೆ ಎಂಬ ಹೆಮ್ಮೆಯನ್ನು ಹೊಂದಿದ್ದೇವೆ. ಆದ್ದರಿಂದ, ಈ ದಿನವನ್ನು ನಾವು ಪ್ರತಿವರ್ಷ ಅರ್ಥಪೂರ್ಣವಾಗಿ ಆಚರಿಸುತ್ತೇವೆ.
ಈ ವರ್ಷ, ನಮ್ಮ ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟವು ಬ್ಯಾಂಕ್ ರಾಷ್ಟ್ರೀಕರಣ ದಿನವನ್ನು “ಭೂಮಿಯನ್ನು ಉಳಿಸಲು ಒಂದು ಗಿಡ ನೆಡೋಣ" ಎಂಬ ವಿನೂತನ ಮತ್ತು ಶ್ರೇಷ್ಠ ಕಾರ್ಯಕ್ರಮದ ಮೂಲಕ ಆಚರಿಸಲು ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.
ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿ ಎಂಆರ್ ಭಟ್ ಮಾತನಾಡುತ್ತಾ, ಬ್ಯಾಂಕ್ ಶಾಖೆಗಳು ದೇಶದ ಅತ್ಯಂತ ದೂರದ ಪ್ರದೇಶಗಳಿಗೂ ವಿಸ್ತರಿಸಲ್ಪಟ್ಟವು ಮತ್ತು ಸಮಾಜದ ಅತ್ಯಂತ ಬಡ ವರ್ಗ ದವರಿಗೂ ಬ್ಯಾಂಕಿಂಗ್ ಸೌಲಭ್ಯಗಳು ದೊರೆಯು ವಂತಾಯಿತು ಎಂದು ಎಂಆರ್ ಭಟ್ ತಿಳಿಸಿದ್ದಾರೆ. ಸಮಾರಂಭದಲ್ಲಿ ಕಾರ್ಯಕ್ರಮದ ಪ್ರಾಯೋಜಕ ರಾದ ಮುದ್ರಾಣಿ ಹೋಮ್ಸ್‌ನ ಪಾಲುದಾರ ಗುರುರಾಜ್ ಶೆಣೈ, ವಿಜಯ ಮಂಗಳ ಹೌಸಿಂಗ್ ಸಹಕಾರ ಸಂಘದ ಅಧ್ಯಕ್ಷ ಕೆ. ಬಾಲಪ್ಪ ಶೆಟ್ಟಿ,ಪದಾಧಿಕಾರಿಗಳಾದ ಕೆ. ಜಯಂತ ಶೆಟ್ಟಿ, ಎಂ.ಶ್ರೀಧರ ಶೆಟ್ಟಿ, ಎಂ. ದಯಾನಂದ ಶೆಟ್ಟಿ ಹಾಗೂ ಕಮಲಾಕ್ಷ, ಮತ್ತು ಜಿಲ್ಲೆಯ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಮೊದಲಾದವರು ಉಪಸ್ಥಿತರಿ ದ್ದರು.