image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಂಧ್ರ ಸಂಸದ ಮಿಧುನ್ ರೆಡ್ಡಿ ಭೇಟಿ: ಹೆಗ್ಗಡೆಯವರಿಂದ ಆಶೀರ್ವಾದ

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಂಧ್ರ ಸಂಸದ ಮಿಧುನ್ ರೆಡ್ಡಿ ಭೇಟಿ: ಹೆಗ್ಗಡೆಯವರಿಂದ ಆಶೀರ್ವಾದ

ಉಜಿರೆ : ಆಂಧ್ರಪ್ರದೇಶದ ಲೋಕಸಭಾ ಸಂಸದರಾದ ಪಿ.ವಿ. ಮಿಧುನ್ ರೆಡ್ಡಿ ಅವರು ಶನಿವಾರ ತಮ್ಮ ಕುಟುಂಬ ಸಮೇತರಾಗಿ ಪವಿತ್ರ ಪುಣ್ಯಕ್ಷೇತ್ರವಾದ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಕ್ಷೇತ್ರಕ್ಕೆ ಆಗಮಿಸಿದ ಅವರು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು. ಧರ್ಮಾಧಿಕಾರಿಗಳ ನಿವಾಸದಲ್ಲಿ ಸಂಸದರು ಹಾಗೂ ಅವರ ಕುಟುಂಬದವರು ಕೆಲಕಾಲ ಸೌಹಾರ್ದಯುತವಾಗಿ ಮಾತುಕತೆ ನಡೆಸಿದರು. ತದನಂತರ ಸಂಸದ ಮಿಧುನ್ ರೆಡ್ಡಿ ಅವರು ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಗೆ ತೆರಳಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಹಾಗೂ ಆರಾಧನೆಗಳನ್ನು ಸಲ್ಲಿಸಿದರು. ಸಂಸದರ ಈ ಭೇಟಿಯ ಸಂದರ್ಭದಲ್ಲಿ ಕ್ಷೇತ್ರದ ಪ್ರಮುಖರು ಹಾಗೂ ಗಣ್ಯರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ