image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಕ್ಷಿಣ ಕನ್ನಡದ ಮೊದಲ ರೋಬೋಟಿಕ್ ಹಿಪ್ ಕಸಿ ಶಸ್ತ್ರಚಿಕಿತ್ಸೆ

ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಕ್ಷಿಣ ಕನ್ನಡದ ಮೊದಲ ರೋಬೋಟಿಕ್ ಹಿಪ್ ಕಸಿ ಶಸ್ತ್ರಚಿಕಿತ್ಸೆ

ಮಂಗಳೂರು : ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನ ಬಳಸಿ ‘ಟೋಟಲ್ ಹಿಪ್ ರಿಪ್ಲೇಸ್‌ಮೆಂಟ್’ (ಕೀಲು ಕಸಿ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಕರಾವಳಿ ಕರ್ನಾಟಕದ ಆರೋಗ್ಯ ರಂಗದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಇನ್ನು ಮುಂದೆ ಸ್ಥಳೀಯ ರೋಗಿಗಳು ಸುಧಾರಿತ ಚಿಕಿತ್ಸೆಗಾಗಿ ಮಹಾನಗರಗಳಿಗೆ ಪ್ರಯಾಣಿಸುವ ಅಗತ್ಯವಿಲ್ಲದಂತಾಗಿದೆ.

ಈ ಐತಿಹಾಸಿಕ ಶಸ್ತ್ರಚಿಕಿತ್ಸೆಯ ನೇತೃತ್ವವನ್ನು ಜಾಯಿಂಟ್ ರಿಪ್ಲೇಸ್‌ಮೆಂಟ್ ಸರ್ಜನ್ ಡಾ. ವಿವಿಯನ್ ರೋಷನ್ ಡಿ'ಅಲ್ಮೇಡಾ ವಹಿಸಿದ್ದರು. ಇವರ ತಂಡದಲ್ಲಿ ಡಾ. ಅಶ್ವಿನ್ ಕಾಮತ್, ಡಾ. ಆಲ್ಫ್ರೆಡ್ ಲೋಬೊ, ಅರಿವಳಿಕೆ ತಜ್ಞರಾದ ಡಾ. ಕಿಶನ್ ಶೆಟ್ಟಿ ಮತ್ತು ಡಾ. ರಿತೇಶ್ ಡಿ'ಕುನ್ಹಾ ಹಾಗೂ ವೈದ್ಯಕೀಯ ಸಿಬ್ಬಂದಿ ಪಾಲ್ಗೊಂಡಿದ್ದರು. ರೋಬೋಟಿಕ್ ತಂತ್ರಜ್ಞಾನದ ಅಳವಡಿಕೆಯಿಂದಾಗಿ ಶಸ್ತ್ರಚಿಕಿತ್ಸೆಯು ಹೆಚ್ಚು ನಿಖರವಾಗಿದ್ದು, ರೋಗಿಯ ಅಂಗರಚನೆಗೆ ಅನುಗುಣವಾಗಿ ಕೀಲು ಜೋಡಣೆ ಸುಲಭವಾಗಿದೆ. ಇದು ರೋಗಿಗಳಿಗೆ ವೇಗವಾಗಿ ಚೇತರಿಸಿಕೊಳ್ಳಲು ಮತ್ತು ಕೀಲುಗಳ ದೀರ್ಘಕಾಲಿಕ ಸುಸ್ಥಿರತೆಗೆ ನೆರವಾಗಲಿದೆ.

ಆಸ್ಪತ್ರೆಯ ನಿರ್ದೇಶಕ ರೆ. ಫಾ. ಫಾಸ್ಟೀನ್ ಲೂಕಾಸ್ ಲೋಬೊ ಅವರ ಮಾರ್ಗದರ್ಶನ ಮತ್ತು ಆಡಳಿತ ಮಂಡಳಿಯ ದೂರದೃಷ್ಟಿಯಿಂದಾಗಿ ಈ ಅತ್ಯಾಧುನಿಕ ವ್ಯವಸ್ಥೆಯನ್ನು ಆಸ್ಪತ್ರೆಗೆ ಅಳವಡಿಸಿಕೊಳ್ಳಲಾಗಿದೆ. ಆರ್ಥೋಪೆಡಿಕ್ ವಿಭಾಗದ ಮುಖ್ಯಸ್ಥ ಡಾ. ಮೃಣಾಲ್ ಶೆಟ್ಟಿ ಅವರ ನಾಯಕತ್ವದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆಯು ಈಗಾಗಲೇ ಅನೇಕ ವಿಭಾಗಗಳಲ್ಲಿ ವಿಶೇಷ ಸೇವೆಗಳನ್ನು ನೀಡುತ್ತಿದ್ದು, ಇದೀಗ ರೋಬೋಟಿಕ್ ಶಸ್ತ್ರಚಿಕಿತ್ಸೆಯ ಮೂಲಕ ರೋಗಿಗಳಿಗೆ ಆಧುನಿಕ ವೈದ್ಯಕೀಯ ಸೇವೆಯನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ.

Category
ಕರಾವಳಿ ತರಂಗಿಣಿ