image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನೀಟ್ ಪರೀಕ್ಷೆಯಲ್ಲಿ ಪುತ್ತೂರು ವಿವೇಕಾನಂದ ಕಾಲೇಜು ವಿದ್ಯಾರ್ಥಿಗಳ ಸಾಧನೆ

ನೀಟ್ ಪರೀಕ್ಷೆಯಲ್ಲಿ ಪುತ್ತೂರು ವಿವೇಕಾನಂದ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಪುತ್ತೂರು: ವೈದ್ಯಕೀಯ ಶಿಕ್ಷಣಕ್ಕಾಗಿ ಕೇಂದ್ರ ಸರಕಾರ ನಡೆಸಿದ 2026ರ ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆ ಮಾಡಿದ್ದಾರೆ. ಕಾಲೇಜಿನ ವಿದ್ಯಾರ್ಥಿನಿ ಮಂಗಳಾಮೃತ ಕೆ. ಆರ್. (ಸುಳ್ಯ ತಾಲೂಕಿನ ಜಾಲ್ಲೂರಿನ ರವಿರಾಜ್ ಕೆ. ಹಾಗೂ ವಾಣಿಕುಮಾರಿ ಎ. ದಂಪತಿಗಳ ಪುತ್ರಿ) ಅವರು 533 ಅಂಕಗಳೊಂದಿಗೆ 97.35 ಪರ್ಸೆಂಟೈಲ್ ಪಡೆದುಕೊಂಡು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಕಾಲೇಜಿನ ಇತರ ಸಾಧಕ ವಿದ್ಯಾರ್ಥಿಗಳಾದ ಬೆಂಗಳೂರಿನ ಉಮಾಶಂಕರ್ ಹಾಗೂ ಸುಮಾ ಕೆ. ಡಿ. ದಂಪತಿಗಳ ಪುತ್ರಿ ಅದಿತಿ ಯು. 531 ಅಂಕಗಳೊಂದಿಗೆ 97.25 ಪರ್ಸೆಂಟೈಲ್ ಪಡೆದರೆ, ಉರಿಮಜಲಿನ ರಾಘವ ಗೌಡ ಹಾಗೂ ಭಾರತಿ ದಂಪತಿಗಳ ಪುತ್ರಿ ಧನ್ವಿ ಆರ್. ಬಿ. 519 ಅಂಕಗಳೊಂದಿಗೆ 96.61 ಪರ್ಸೆಂಟೈಲ್ ಪಡೆದಿದ್ದಾರೆ. ಬಂಟ್ವಾಳದ ಕಲ್ಯಾರ್‌ನ ಯಶವಂತ ಪೂಜಾರಿ ಹಾಗೂ ಸರೋಜಿನಿ ಕೆ. ದಂಪತಿಗಳ ಪುತ್ರಿ ಮಾನ್ಯತಾ 510 ಅಂಕಗಳೊಂದಿಗೆ 96.09 ಪರ್ಸೆಂಟೈಲ್, ಬೆಂಗಳೂರಿನ ವೀರೇಂದ್ರ ಕೆ. ಆರ್. ಹಾಗೂ ಕುಮುದಿನಿ ವೈ. ಜೆ. ದಂಪತಿಗಳ ಪುತ್ರ ನಿಶಾಂತ್ ಕೆ. ವಿ. 460 ಅಂಕಗಳೊಂದಿಗೆ 92.46 ಪರ್ಸೆಂಟೈಲ್ ಹಾಗೂ ಉರಿಮಜಲಿನ ಕೇಶವಮೂರ್ತಿ ಸಿ. ಹಾಗೂ ಗೀತಾಲಕ್ಷ್ಮೀ ದಂಪತಿಗಳ ಪುತ್ರ ಅಜೇಯರಾಮ್ 457 ಅಂಕಗಳೊಂದಿಗೆ 92.21 ಪರ್ಸೆಂಟೈಲ್ ಗಳಿಸಿದ್ದಾರೆ. ಪುತ್ತೂರಿನ ತೆಂಕಿಲದ ಸತೀಶ್ ವಾಗ್ಲೆ ಕೆ. ಹಾಗೂ ಪೂರ್ಣಿಮಾ ಎಸ್. ದಂಪತಿಗಳ ಪುತ್ರಿ ತನ್ಮಯಿ ವಾಗ್ಲೆ ಪಿ. 446 ಅಂಕಗಳೊಂದಿಗೆ 91.22 ಪರ್ಸೆಂಟೈಲ್ ಪಡೆದುಕೊಂಡಿದ್ದಾರೆ.

ಮೈಸೂರಿನ ಹೂಟಗಳ್ಳಿಯ ಪೂಣಚ್ಚ ವೈ. ಪಿ. ಹಾಗೂ ಜಯಂತಿ ಕೆ. ಪಿ. ದಂಪತಿಗಳ ಪುತ್ರಿ ಸಪ್ತಮಿ ವೈ. ಪಿ. 432 ಅಂಕಗಳೊಂದಿಗೆ 89.86 ಪರ್ಸೆಂಟೈಲ್, ಬಂಟ್ವಾಳದ ಕರೋಪಾಡಿಯ ಎಸ್. ಗೋಪಾಲಕೃಷ್ಣ ಹಾಗೂ ಅನಿತಾ ಎಸ್. ದಂಪತಿಗಳ ಪುತ್ರಿ ವಿದ್ಯಾಲಕ್ಷ್ಮೀ ಎಸ್. ಜಿ. 432 ಅಂಕಗಳೊಂದಿಗೆ 89.86 ಪರ್ಸೆಂಟೈಲ್, ಹಾಸನದ ಹೆಚ್. ಡಿ. ಕೃಷ್ಣ ಗೌಡ ಹಾಗೂ ಹೆಚ್. ಎನ್. ಭಾರತಿ ದಂಪತಿಗಳ ಪುತ್ರ ಹೆಚ್. ಕೆ. ತರುಣೇಶ್ 428 ಅಂಕಗಳೊಂದಿಗೆ 89.45 ಪರ್ಸೆಂಟೈಲ್ ಸಾಧಿಸಿದ್ದಾರೆ. ಪುತ್ತೂರು ತಾಲೂಕಿನ ಪೆಲರ್ಂಪಾಡಿಯ ಶಿವಪ್ರಸಾದ್ ಎಂ. ಹಾಗೂ ಪ್ರಸನ್ನ ಎಂ. ಎಸ್. ದಂಪತಿಗಳ ಪುತ್ರಿ ಸಮನ್ವಿತಾ ಎಮ್. ಎಸ್. 421 ಅಂಕಗಳೊಂದಿಗೆ 88.72 ಪರ್ಸೆಂಟೈಲ್, ಹಾರಾಡಿಯ ಅಶ್ವಿನ್ ಬಿಎಚ್ ಹಾಗೂ ರಜನಿ ರೈ ಬಿ ದಂಪತಿಗಳ ಪುತ್ರಿ ಹಿತೈಷಿ ಆಳ್ವ 418 ಅಂಕಗಳು ಮತ್ತು ಕೊಡಗಿನ ಮಂದಪ್ಪ ಬಿ. ಎ. ಹಾಗೂ ಸ್ವಾತಿ ಬಿ. ಎಮ್. ದಂಪತಿಗಳ ಪುತ್ರಿ ಟೀನಾ ಬಿ. ಎಮ್. 418 ಅಂಕಗಳನ್ನು ಪಡೆದು ಸಾಧನೆಗೈದಿದ್ದಾರೆ. ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.

Category
ಕರಾವಳಿ ತರಂಗಿಣಿ