image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ವಿಶಿಷ್ಟ ರಂಗ ಪ್ರಯೋಗ: 'ಅಶ್ವಪರ್ವ' ನಾಟಕದ ಓದು ಕಾರ್ಯಕ್ರಮ ಯಶಸ್ವಿ

ಮಂಗಳೂರಿನಲ್ಲಿ ವಿಶಿಷ್ಟ ರಂಗ ಪ್ರಯೋಗ: 'ಅಶ್ವಪರ್ವ' ನಾಟಕದ ಓದು ಕಾರ್ಯಕ್ರಮ ಯಶಸ್ವಿ

ಮಂಗಳೂರು: ಜರ್ನಿ ಥೇಟರ್ ಗ್ರೂಪ್ ಸಂಸ್ಥೆಯು ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಜುಲೈ 12, 2026ರಂದು ನಗರದ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ಆಯೋಜಿಸಿದ್ದ "ನಾಟಕದ ಓದು" ಕಾರ್ಯಕ್ರಮವು ರಂಗಾಸಕ್ತರ ಗಮನ ಸೆಳೆಯಿತು. ಈ ಕಾರ್ಯಕ್ರಮದಲ್ಲಿ ರಂಗಾಯಣದ ಎಸ್. ರಾಮನಾಥ್ ಅವರ ಜನಪ್ರಿಯ ನಾಟಕ "ಅಶ್ವಪರ್ವ"ವನ್ನು ಹೊಸದೊಂದು ಆಯಾಮದಲ್ಲಿ ಪ್ರಸ್ತುತಪಡಿಸಲಾಯಿತು. ಕೇವಲ ಸಂಭಾಷಣೆಯನ್ನು ಓದುವುದಕ್ಕೆ ಸೀಮಿತವಾಗದೆ, ಪಾತ್ರ ಮತ್ತು ಸನ್ನಿವೇಶಗಳಿಗೆ ಪೂರಕವಾದ ಹಿನ್ನೆಲೆ ಸಂಗೀತ ಮತ್ತು ಹಾಡುಗಳನ್ನು ಬಳಸುವ ಮೂಲಕ ಇದು ನಾಟಕವನ್ನು ಓದುವಿಕೆಯಲ್ಲಿನ ಒಂದು ವಿಶಿಷ್ಟ ಪ್ರಯೋಗವಾಗಿ ಮೂಡಿಬಂತು.

​ಕಾರ್ಯಕ್ರಮದಲ್ಲಿ ಹಿರಿಯ ನಟ ಡಾ. ಆರ್. ನರಸಿಂಹ ಮೂರ್ತಿ (ಅಶ್ವತ್ಥಾಮ), ರೋಹನ್ ಉಚ್ಚಿಲ್ (ನಾರಣಪ್ಪ), ಕಿರಣ್ ಕುಮಾರ್ (ಕುಂಭ), ಸುನಿಲ್ ಪಲ್ಲಮಜಲು (ಕಾಲ), ಶರಣ್ಯ ಎನ್. ಟಿ. (ಪಾರಿವಾಳ) ಮತ್ತು ಶಶಾಂಕ್ ಐತಾಳ್ (ದೀಪ) ತಮ್ಮ ಗಾಯನ ಹಾಗೂ ಅಭಿನಯಪೂರ್ಣ ಓದುವಿಕೆಯ ಮೂಲಕ ಪಾತ್ರಗಳಿಗೆ ಜೀವ ತುಂಬಿದರು. ಮೇಘನಾ ಕುಂದಾಪುರ ಮತ್ತು ಶಮಿತಾ ಆಚಾರ್ಯ ಅವರು ಹಿನ್ನೆಲೆ ಗಾಯನ ಮತ್ತು ಸಂಗೀತ ನಿರ್ವಹಣೆಯೊಂದಿಗೆ ನಾಟಕದ ಭಾವತೀವ್ರತೆಯನ್ನು ಹೆಚ್ಚಿಸಿದರು. ಸುಧೀಶ್ ಕೂಡ್ಲು ಮತ್ತು ಶ್ರೀಶ ಕುಮಾರ್ ಬೆಳಕಿನ ವ್ಯವಸ್ಥೆಯನ್ನು, ರಾಜೇಶ್ ಧ್ವನಿ ನಿರ್ವಹಣೆಯನ್ನು ಹಾಗೂ ಕಾವ್ಯ ಹೆಬ್ರಿ ದಾಖಲೀಕರಣದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕಾರ್ಯಕ್ರಮದ ನಂತರ ನಡೆದ ಸಂವಾದದಲ್ಲಿ ಪಾಲ್ಗೊಂಡಿದ್ದ ಹಿರಿ-ಕಿರಿಯ ಪ್ರೇಕ್ಷಕರು, ನಾಟಕದ ಓದಿನಲ್ಲಿ ಇಂತಹದೊಂದು ಪ್ರಯೋಗ ಹೊಸತನದಿಂದ ಕೂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Category
ಕರಾವಳಿ ತರಂಗಿಣಿ