ಮಂಗಳೂರು : ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ, ಪ್ರಸಿದ್ದ ಹೀರೋ ಕೈಯಲ್ಲಿ ಹತನಾದ ಎನ್ನುವಂತ ರೇಣುಕಾಸ್ವಾಮಿ ವಿಷಯವನ್ನೇ ನವರಾತ್ರಿಯ ವೇಷಕ್ಕೆ ಉಪಯೋಗಿಸುವ ಮೂಲಕ ವಿಕೃತಿ ಮೆರೆದಿದ್ದಾರೆ ಎಂದರೆ ತಪ್ಪಾಗಲ್ಲ.
ಕರಾವಳಿಯಲ್ಲಿ ನವರಾತ್ರಿ ಬಂತೆಂದರೆ ನಾನಾ ವೇಷಗಳು ಜನರನ್ನು ರಂಜಿಸುವ ಮೂಲಕ ನವರಾತ್ರಿಗೆ ವಿಶೇಷ ಮೆರುಗು ನೀಡುತ್ತದೆ. ಇದೀಗ ರೇಣುಕಾ ಸ್ವಾಮಿ ಪ್ರೇತದ ಹಾಗೂ ಯಮರಾಜನ ವೇಷಗಳ ವೇಷಧಾರಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರೇಣುಕಾ ಸ್ವಾಮಿ ಪ್ರೇತದ ಹಾಗೂ ಯಮರಾಜನ ವೇಷ ಧರಿಸಿದ ವೇಷಧಾರಿಗಳು ತುಳುವಿನಲ್ಲಿ ಮಾತನಾಡುತ್ತಾರೆ. ಅದೂ ಇಲ್ಲಿ ಯಮರಾಜನ ಪಾತ್ರದಾರಿ ರೇಣುಕಾಸ್ವಾಮಿ ಪ್ರೇತದ ಪಾತ್ರದಾರಿಗೆ ಕೇಳುವ ಪ್ರಶ್ನೆಗಳನ್ನು ಕೇಳಿದಾಗ ಜನರು ಕೂಡಾ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಹಾಸ್ಯ ಬೇಕು ಬೇಕು ನಿಜ. ಆದರೆ ಆ ಹಾಸ್ಯ ಹೇಗಿರಬೇಕು ಎನ್ನುವುದನ್ನು ಅರಿತುಕೊಳ್ಳಬೇಕು. ಈ ವೈರಲ್ ವಿಡಿಯೋ ನೋಡಿದಾಗ ಮಾನವೀಯತೆ ಮರೆತಿದ್ದಾರೆಯೇ ನಮ್ಮ ಜನ ಎನ್ನುವ ಪ್ರಶ್ನೆ ಮನುಷ್ಯನಾದವನಿಗೆ ಕಾಡದೇ ಇರದು. ಮೃತ ಪಟ್ಟ ಪ್ರತಿಯೊಬ್ಬನಿಗೂ ಕುಟುಂಬವಿರುತ್ತದೆ. ಇಂತಹ ಹುಚ್ಚಾಟವನ್ನು ಅವರ ಕುಟುಂಬಸ್ಥರು ನೋಡಿದರೆ ಅವರಿಗೆ ಎಷ್ಟು ನೋವಾಗಬಹುದು ಒಮ್ಮೆ ಯೋಚಿಸಬೇಕಾಗುತ್ತದೆ.