image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಸಂತ ಕುಮಾರ್ ಪೆರ್ಲ ಅವರ ‘ನಾಕೂರು’ ಕೃತಿ ಲೋಕಾರ್ಪಣೆ

ವಸಂತ ಕುಮಾರ್ ಪೆರ್ಲ ಅವರ ‘ನಾಕೂರು’ ಕೃತಿ ಲೋಕಾರ್ಪಣೆ

ಮಂಗಳೂರು: ಸಾಹಿತಿ ವಸಂತ ಕುಮಾರ್ ಪೆರ್ಲ ಅವರು ತುಳುವಿನಲ್ಲಿ ಬರೆದ 10 ಸಣ್ಣಕಥೆಗಳನ್ನು ತೆಲುಗಿಗೆ ಅನುವಾದಿಸಿ ‘ನಾಕೂರು’ ಎಂಬ ಹೆಸರಿನಲ್ಲಿ ಪ್ರಕಟಿಸಲಾಗಿದ್ದು, ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಈ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.

ಭೂಮಿಗೀತ ಸಾಹಿತ್ಯಿಕ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಪುಸ್ತಕವನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತುಳುವಿನ ಸಣ್ಣಕಥೆಗಳು ತೆಲುಗು ಭಾಷೆಗೆ ಅನುವಾದಗೊಂಡು ಪ್ರಕಟಗೊಂಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೃತಿ ಪರಿಚಯವನ್ನು ಮಾಡಿದ ಲೇಖಕ ಜಿ.ಆರ್. ಕೃಷ್ಣ ಅವರು, ‘ನಾಕೂರು’ ಕೃತಿಯು ತುಳು ಸಂಸ್ಕೃತಿಯ ಪ್ರತಿಬಿಂಬವಾಗಿದೆ ಎಂದರು. ಕಡಬ ಸಮೀಪದ ಕುಮಾರಧಾರಾ ನದಿಯ ಹರಿಯುವ ಪ್ರದೇಶವೇ ‘ನಾಕೂರು’ ಆಗಿದ್ದು, ಪ್ರಕೃತಿ, ಸಂಸ್ಕೃತಿ ಮತ್ತು ತುಳುನಾಡಿನ ಇತಿಹಾಸವನ್ನು ಕಥೆಗಳಲ್ಲಿ ಸುಂದರವಾಗಿ ಕಟ್ಟಿಕೊಡಲಾಗಿದೆ ಎಂದು ತಿಳಿಸಿದರು. ಹೈದರಾಬಾದ್‌ನ ರಂಗನಾಥ ರಾಮಚಂದ್ರ ರಾವ್ ಅವರು ಈ ಕಥೆಗಳನ್ನು ತೆಲುಗಿಗೆ ಅನುವಾದಿಸಿದ್ದಾರೆ.
ಕಾರ್ಯಕ್ರಮದಲ್ಲಿ ಲೇಖಕ ಸದಾನಂದ ನಾರಾವಿ ಅವರು ಸ್ವಾಗತಿಸಿದರು. ಲೇಖಕಿ ಶೈಲಾ ಕುಮಾರಿ ಕೆ. ವಂದಿಸಿದರು. ಈ ಸಮಾರಂಭದಲ್ಲಿ ಡಾ. ಮೈಥಿಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ