image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಿಲಾಗ್ರಿಸ್ ವಾರ್ಡ್‌ನ ಮೇಲಿನಮೊಗರು ಧ್ವಜಸ್ತಂಭದ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಚಾಲನೆ

ಮಿಲಾಗ್ರಿಸ್ ವಾರ್ಡ್‌ನ ಮೇಲಿನಮೊಗರು ಧ್ವಜಸ್ತಂಭದ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಚಾಲನೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 47ನೇ ಮಿಲಾಗ್ರಿಸ್ ವಾರ್ಡ್‌ನ ಮೇಲಿನಮೊಗರು ಧ್ವಜಸ್ತಂಭದ ಬಳಿ 10 ಲಕ್ಷ ರೂಪಾಯಿಗಳ ವಿಶೇಷ ಅನುದಾನದಲ್ಲಿ ಹಮ್ಮಿಕೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

​ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಸ್ಥಳೀಯ ನಿವಾಸಿಗಳ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಲಭ್ಯವಿರುವ ಅನುದಾನವನ್ನು ಕ್ರೋಢೀಕರಿಸಿ ರಸ್ತೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಅಭಿವೃದ್ಧಿ ಕಾಮಗಾರಿ ನಡೆಯುವ ಅವಧಿಯಲ್ಲಿ ಸಾರ್ವಜನಿಕರಿಗೆ ಸ್ವಲ್ಪ ಮಟ್ಟಿನ ಅನಾನುಕೂಲ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಸಹಕರಿಸಬೇಕು ಎಂದು ಮನವಿ ಮಾಡಿದರು.

​ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ರಮೇಶ್ ಹೆಗ್ಡೆ, ಮೋಹನ್ ಪೂಜಾರಿ, ರಾಮಮೂರ್ತಿ ಸೋಮನಹಳ್ಳಿ, ಪ್ರವೀಣ್ ನಿಡ್ಡೇಲ್, ಶಬರೀಶ್, ಮಂಜುನಾಥ್ ಅತ್ತಾವರ, ವಿನೋದ್ ಕುಮಾರ್, ಶರ್ಮಿಳಾ ಶೆಟ್ಟಿ, ಹರೀಶ್ ರಾವ್, ಸುರೇಶ್ ಕುಮಾರ್, ಜ್ಯೋತಿ ಯಲಬುರ್ಗಿ, ಎಂ.ಬಿ. ರಾಜ, ಶೈಲ ಚಂದ್ರಹಾಸ್, ರಮಾಕಾಂತ್ ನಾಯಕ್ ಸೇರಿದಂತೆ ಸ್ಥಳೀಯರು ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ