image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ಜುಲೈ 16 ರಂದು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ‘ಸಂವೃದ್ಧಿ ಕೆರಿಯರ್ ನೆಕ್ಸ್ಟ್-2026’ ಉದ್ಯೋಗ ಮೇಳ

ಮಂಗಳೂರು ಜುಲೈ 16 ರಂದು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ‘ಸಂವೃದ್ಧಿ ಕೆರಿಯರ್ ನೆಕ್ಸ್ಟ್-2026’ ಉದ್ಯೋಗ ಮೇಳ

ಮಂಗಳೂರು : ಗಾಂಧಿನಗರದಲ್ಲಿರುವ ಶ್ರೀ ಗೋಕರ್ಣನಾಥೇಶ್ವರ ಕಾಲೇಜು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (KCCI) ಸಹಯೋಗದೊಂದಿಗೆ ‘ಸಂವೃದ್ಧಿ ಕೆರಿಯರ್ ನೆಕ್ಸ್ಟ್-2026’ ಎಂಬ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿದೆ. ಈ ಕಾರ್ಯಕ್ರಮವು 2026ರ ಜುಲೈ 16ರ ಗುರುವಾರದಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಕಾಲೇಜು ಆವರಣದಲ್ಲಿ ನಡೆಯಲಿದೆ.

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ಉದ್ಯೋಗದಾತರೊಂದಿಗೆ ಜೋಡಿಸುವ ಉದ್ದೇಶದಿಂದ ಈ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ನೇಮಕಾತಿ, ಇಂಟರ್ನ್‌ಶಿಪ್, ಅರೆಕಾಲಿಕ (Part-time) ಮತ್ತು ಪೂರ್ಣಾವಧಿ (Full-time) ಉದ್ಯೋಗಾವಕಾಶಗಳು ಲಭ್ಯವಿರಲಿವೆ. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಈ ಮೇಳದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಆಯೋಜಕರು ಆಹ್ವಾನ ನೀಡಿದ್ದಾರೆ.

ಉದ್ಯೋಗ ಮೇಳದ ಕುರಿತು ಹೆಚ್ಚಿನ ಮಾಹಿತಿ ಅಥವಾ ವಿಚಾರಣೆಗಳಿಗಾಗಿ ಆಸಕ್ತರು ಮೊಬೈಲ್ ಸಂಖ್ಯೆಗಳಾದ +91 99190 63118, +91 97384 24847, +91 78290 47600 ಅಥವಾ sgc.samvridhi@gmail.com ಇಮೇಲ್ ವಿಳಾಸದ ಮೂಲಕ ಸಂಘಟನಾ ಸಮಿತಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕಾರ್ಯಕ್ರಮದ ಸಂಚಾಲಕರಾದ ಮಿಥುನ್ ಚಂದ್ರ ಆರ್.ಕೆ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ