image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಿಎ ಫೌಂಡೇಶನ್ ಪರೀಕ್ಷೆ: ಆಳ್ವಾಸ್‌ನ 41 ವಿದ್ಯಾರ್ಥಿಗಳು ಉತ್ತೀರ್ಣ

ಸಿಎ ಫೌಂಡೇಶನ್ ಪರೀಕ್ಷೆ: ಆಳ್ವಾಸ್‌ನ 41 ವಿದ್ಯಾರ್ಥಿಗಳು ಉತ್ತೀರ್ಣ

ಮೂಡುಬಿದಿರೆ: ಇತ್ತೀಚೆಗೆ ನಡೆದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಾಣಿಜ್ಯ ವಿಭಾಗದ 41 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಪರೀಕ್ಷೆಯಲ್ಲಿ ಜಶ್ ಕಾವೇರಿಯಪ್ಪ ಎ.ಎಂ. (297), ಪ್ರತೀಕ್ ಜೈನ್ ಹಾಗೂ ಸುಧೀಕ್ಷಾ ಎಸ್. ಶೆಟ್ಟಿ ತಲಾ 290 ಅಂಕ, ಪ್ರದ್ಯುಮ್ನ ಭೈರಡ್ಡಿ (289), ರಾಹುಲ್ (288), ಬಸವೇಶ್ವರ (287), ವೈಷ್ಣವಿ ರಾವ್ (286), ದಿಶಾ (279), ಮೋಹಿತ್ ಸಂದೇಶ್ ದೇಸಾಯಿ (276), ಶ್ರೇಯಾಂಕ್ ಆರ್. ಶೆಟ್ಟಿ (262), ಬೃಂದಾ ಆರ್.ಟಿ. (252), ಸ್ಪೂರ್ತಿ ವೀರೇಶ್ ಪಟ್ಟಣಶೆಟ್ಟಿ (251), ಗಾನಶ್ರೀ ಟಿ. (244), ಸಂಶ್ರಿತ್ (240), ಆದರ್ಶ್ ಬಾಲಚಂದ್ರ (239), ಎಸ್.ಜಿ. ಪ್ರತ್ಯೂಷ್ (239), ಶಾರೇಲ್ ಲವಿಟಾ ರೋಡ್ರಿಗ್ಸ್ (236), ಮೊಹಮ್ಮದ್ ಫಹೀಮ್ (232), ವಿಕ್ಯಾತ್ (232), ಸಿಂಚನಾ ಶ್ಯಾಮಸುಂದರ್ ಡಂಬಳ (231), ನಿಹಾರಿಕಾ ಜೆ. ಶೆಟ್ಟಿ (231), ಟಿ. ಸೃಷ್ಟಿ (230), ಶ್ರಾವ್ಯ (230), ಮೋಹಿತ್ ಗೌಡ ಆರ್.ಎಸ್. (229), ಯಶಸ್ವಿನಿ ಎಚ್. (229), ಪೂರ್ಣ ಚಂದ್ರ (220), ಸಾನ್ವಿ ಸತೀಶ್ ಮಸೂರ್ (216), ರಿತಿಕಾ ಕುಲಾಲ್ (215), ಪೂರ್ಣಿಮಾ ಅಶೋಕ್ ಭಿಸ್ತೆ (215), ಸ್ವಪ್ನ (214), ಪರೀಕ್ಷಿತ್ ಕಾವ (214), ರತನ್ (212), ಸಂಜನಾ ವಿ ಕಿಣಿ (211), ಎ.ಪಿ. ಶೋಭಿತಾ (206), ಸುಮೀತ್ ಗಡದ್ (206), ಅಮೃತಾ ಎಚ್.ಎಂ. (203), ಎನ್.ಆರ್. ಭುವನ್‌ಸಿಂಗ್ (202), ಕಾರ್ತಿಕ್ ಪೈ (202), ಪೂರ್ಣಿಮಾ ಪೂಜಾರಿ (201), ಎಂ. ನೇಹಾ (200) ಹಾಗೂ ಮಧುಶ್ರೀ ಎಸ್.ಆರ್. (200) ಅಂಕಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಸಿಎ ಫೌಂಡೇಶನ್‌ ಹಂತದಿಂದ ಸಿಎ ಇಂಟರ್‌ಮೀಡಿಯೇಟ್ ಹಾಗೂ ಸಿಎ ಫೈನಲ್‌ವರೆಗೆ ಸಮಗ್ರ ತರಬೇತಿ ವ್ಯವಸ್ಥೆ ಕಲ್ಪಿಸಲಾಗಿದೆ. ದೇಶದ ವಿವಿಧ ಭಾಗಗಳ ಅನುಭವಿ ಚಾರ್ಟರ್ಡ್ ಅಕೌಂಟೆಂಟ್‌ಗಳು ಹಾಗೂ ವಿಷಯ ತಜ್ಞರಿಂದ ಗುಣಮಟ್ಟದ ಬೋಧನೆ, ನಿಯಮಿತ ಮೌಲ್ಯಮಾಪನ ಮತ್ತು ವೈಯಕ್ತಿಕ ಮಾರ್ಗದರ್ಶನ ನೀಡಲಾಗುತ್ತಿದ್ದು, ಈ ಪರಿಕಲ್ಪನಾ ಆಧಾರಿತ ಕಲಿಕಾ ಮಾದರಿಯೇ ವಿದ್ಯಾರ್ಥಿಗಳ ನಿರಂತರ ಯಶಸ್ಸಿಗೆ ಕಾರಣ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ತಿಳಿಸಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲರು ಹಾಗೂ ವಾಣಿಜ್ಯ ವಿಭಾಗದ ಡೀನ್ ಶ್ಲಾಘಿಸಿ, ಅಭಿನಂದಿಸಿದ್ದಾರೆ.

Category
ಕರಾವಳಿ ತರಂಗಿಣಿ