ಸುರತ್ಕಲ್: ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸುರತ್ಕಲ್ ಬೀಚ್ ರನ್ನರ್ಸ್ (SBR) ವತಿಯಿಂದ ವನಮಹೋತ್ಸವ 2026ರ ಅಂಗವಾಗಿ ಹೊಸಬೆಟ್ಟಿನ ವೀರ ಹನುಮಾನ್ ಮಂದಿರದ ಆವರಣದಲ್ಲಿ "ರನ್ ಫಾರ್ ನೇಚರ್" ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು SBR ಅಧ್ಯಕ್ಷರಾದ ಶ್ರೀ ವಿಲ್ವಿನ್ ಕೌಂಡ್ಸ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮೈ ಭಾರತ್, ದಕ್ಷಿಣ ಕನ್ನಡದ ಉಪ ನಿರ್ದೇಶಕರಾದ ಶ್ರೀ ಉಲ್ಲಾಸ್ ಕೆ.ಟಿ.ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪರಿಸರ ಕಾಳಜಿಯ ಕುರಿತು ಮಾತನಾಡಿದರು. ಶ್ರೀ ಶರತ್ ಎಲ್. ಕರ್ಕೇರ ಮತ್ತು ಶ್ರೀ ಓಂ ಶಿವ ಕೋಟ್ಯಾನ್ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾಥ್ ನೀಡಿದರು.
"ವೃಕ್ಷೋ ರಕ್ಷತಿ ರಕ್ಷಿತಃ" ಎಂಬ ಆಶಯದೊಂದಿಗೆ ಆಯೋಜಿಸಲಾಗಿದ್ದ ಈ ಪರಿಸರ ಸ್ನೇಹಿ ಕಾರ್ಯಕ್ರಮವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗುವುದರೊಂದಿಗೆ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮವನ್ನು ಶ್ರೀಮತಿ ಶ್ರುತಿ ಮಯ್ಯ ನಿರೂಪಿಸಿದರು.