ಮಂಗಳೂರು: ಪಿಲಿ ನಲಿಕೆ ಪ್ರತಿಷ್ಠಾನ ಹಾಗೂ ನಮ್ಮಟಿವಿ ಸಹಯೋಗದಲ್ಲಿ ಪಿಲಿನಲಿಕೆ ಸೀಸನ್ 9ಗೆ ಮಂಗಳಾ ಕ್ರೀಡಾಂಗಣದಲ್ಲಿ ಚಾಲನೆ ದೊರಕಿತು. ಕಟೀಲು ಕ್ಷೇತ್ರದ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಮಾತಾಡಿ “ಹುಲಿವೇಷದ ಕಲಾವಿದರಿಗೆ ಶ್ರೀ ದೇವಿ ಹೆಚ್ಚಿನ ಶಕ್ತಿ ಕೊಡುವುದರ ಜೊತೆಗೆ ತಾಯಿಯ ಆಶೀರ್ವಾದ ಸದಾ ಇಂತಹ ಕಾರ್ಯಕ್ರಮಗಳ ಮೇಲಿರಲಿ“ ಎಂದರು.
ಮಾರ್ಸ್ಕ್ ಸಂಸ್ಥೆ ಸಿಇಓ ಗೌತಮ್ ಶೆಟ್ಟಿ ಮಾತಾಡಿ, ”ಹಿಂದಿನ ಕಾಲದಲ್ಲಿ ಬಲ ಇದ್ದವರು ಮಾತ್ರ ನಾಯಕರಾಗುತ್ತಿದ್ದರು ಆದರೆ ಇಂದು ಬುದ್ಧಿ ಇರುವವರು ನಾಯಕರಾಗುತ್ತಿದ್ದಾರೆ.
ಪಿಲಿ ನಲಿಕೆ ಆಯೋಜಕರಾದ ಮಿಥುನ್ ರೈ ಅವರು ಬಲ, ಬುದ್ಧಿ ಮತ್ತು ಹೃದಯವನ್ನು ಹೊಂದಿರುವ ನಾಯಕರಾಗಿದ್ದಾರೆ. ಅವರ ಕಾರ್ಯಕ್ರಮ ಯಶಸ್ವಿಯಾಗಲಿ“ ಎಂದರು.
ನಂತರ ಮಾದ್ಯಮದ ಜೊತೆ ಮಾತನಾಡಿದ ಪಿಲಿನಲಿಕೆ ಪ್ರತಿಷ್ಟಾನದ ಅಧ್ಯಕ್ಷ ಮಿಥುನ್ ರೈ ಮಾತನಾಡಿ ರಾಜ್ಯೋತ್ಸವ ಪೆರೆಡ್ ನಲ್ಲಿ ನಮ್ಮ ಹೆಮ್ಮೆಯ ಪಿಲಿ ನಲಿಕೆಯನ್ನು ತರುವುದೇ ನಮ್ಮ ಮುಖ್ಯ ಉದ್ದೇಶ ಎಂದರು.
ವೇದಿಕೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಪ್ರವೀಣ್ ಚಂದ್ರ ಆಳ್ವ, ನಮ್ಮ ಟಿವಿ ಸಿಇಓ ಶಿವಚರಣ್ ಶೆಟ್ಟಿ, ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಎಂ.ಮಿಥುನ್ ರೈ, ವೆಂಕಟೇಶ್ ಭಟ್ ಪಾವಂಜೆ, ಕೆ.ಕೆ. ಪೇಜಾವರ, ಅದಾನಿ ಗ್ರೂಪ್ ನ ಕಿಶೋರ್ ಆಳ್ವ, ಡಾ.ದೇವದಾಸ್ ಕಾಪಿಕಾಡ್, ಶರ್ಮಿಳಾ ಕಾಪಿಕಾಡ್ ಮತ್ತಿತರರು ಉಪಸ್ಥಿತರಿದ್ದರು.