ಸುಳ್ಯ: ಮಂಡೆಕೋಲು ಗ್ರಾಮದ ಬಾಯ್ಕೋಡಿ-ಚೇರ್ದಮೂಲೆ ಪರಿಶಿಷ್ಟ ಜಾತಿ ಕಾಲೋನಿ ಸಂಪರ್ಕ ರಸ್ತೆ ಹಾಗೂ ಬೆಂಗತ್ತಮಲೆ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆಯನ್ನು ಸುಳ್ಯ ವಿದಾನಸಭಾ ಶಾಸಕಿ ಭಾಗೀರಥಿ ಮರುಳ್ಯ ಉದ್ಘಾಟಿಸಿದರು.
ಬಾಯ್ಕೋಡಿ-ಚೇರ್ದಮೂಲೆ ರಸ್ತೆಯನ್ನು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಹಾಗೂ ಬೆಂಗತ್ತಮಲೆ ರಸ್ತೆಯನ್ನು 5.5 ಲಕ್ಷ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿಪಡಿಸಿ ನಿರ್ಮಾಣ ಮಾಡಲಾಗಿದೆ. ಈ ಅಭಿವೃದ್ಧಿ ಕಾರ್ಯವು ಸ್ಥಳೀಯ ನಿವಾಸಿಗಳಿಗೆ ಉತ್ತಮ ಸಾರಿಗೆ ಸಂಪರ್ಕ ಕಲ್ಪಿಸಿಕೊಟ್ಟಿದೆ.
ಈ ಉದ್ಘಾಟನಾ ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ವಿನುತ ಪಾತಿಕಲ್ಲು, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯೆ ಮಮತ ಬೊಳುಗಲ್ಲು, ಮಾಜಿ ಸದಸ್ಯ ಅನಿಲ್ ತೊಟಪ್ಪಾಡಿ, ಬಿಜೆಪಿ ಮಂಡಲ ಪ್ರಮುಖರಾದ ಶುಬೋದ್ ಶೆಟ್ಟಿ ಮೆನಾಲ, ಜಯರಾಜ್ ಕುಕ್ಕೆಟ್ಟಿ, ಸುರೇಶ ಕಣೆಮಾರಡ್ಕ, ಶಿವಪ್ರಸಾದ್ ಉಗ್ರಾಣಿಮನೆ, ಉದಯ ಆಚಾರ್ ಸೇರಿದಂತೆ ಹಲವು ಪ್ರಮುಖ ಕಾರ್ಯಕರ್ತರು ಮತ್ತು ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು.