image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಂಸಿಸಿ ಬ್ಯಾಂಕ್‌ನಿಂದ 1,535 ಕೋಟಿ ರೂ. ವ್ಯವಹಾರ: ದೇರಳಕಟ್ಟೆ ಮತ್ತು ಕಟಪಾಡಿಯಲ್ಲಿ ಹೊಸ ಶಾಖೆಗಳ ಉದ್ಘಾಟನೆ

ಎಂಸಿಸಿ ಬ್ಯಾಂಕ್‌ನಿಂದ 1,535 ಕೋಟಿ ರೂ. ವ್ಯವಹಾರ: ದೇರಳಕಟ್ಟೆ ಮತ್ತು ಕಟಪಾಡಿಯಲ್ಲಿ ಹೊಸ ಶಾಖೆಗಳ ಉದ್ಘಾಟನೆ

ಮಂಗಳೂರು: 114 ವರ್ಷಗಳ ಇತಿಹಾಸ ಹೊಂದಿರುವ  ​ಎಂ ಸಿ ಸಿ ಬ್ಯಾಂಕ್ ನ  22ನೇ ಶಾಖೆಯನ್ನು ಜೂನ್ 28, 2026ರಂದು ದೇರಳಕಟ್ಟೆಯಲ್ಲಿ  ಮತ್ತು ಕಟಪಾಡಿಯಲ್ಲಿ  23ನೇ ಶಾಖೆಯನ್ನು ಆಗಸ್ಟ್ 2, 2026ರಂದು ಉದ್ಘಾಟಿಸಲಾಗುವುದು ಎಂದು ​ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊ 

ತಿಳಿಸಿದ್ದಾರೆ. ಬ್ಯಾಂಕ್ ನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ದೇರಳಕಟ್ಟೆಯಲ್ಲಿ ಬ್ಯಾಂಕಿನ 16ನೇ ಎಟಿಎಂ ಕೂಡ ಉದ್ಘಾಟನೆಗೊಳ್ಳಲಿರುವುದಲ್ಲದೆ,  ಮೋರ್ಗನ್ಸ್ ಗೇಟ್ ಶಾಖೆಯನ್ನು ಜುಲೈ 25 ರಂದು ಮತ್ತು ಮೂಲ್ಕಿ ಶಾಖೆಯನ್ನು ಆಗಸ್ಟ್ 22 ರಂದು ಸ್ಥಳಾಂತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ದೇರಳಕಟ್ಟೆ ಶಾಖೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನಿಲ್ ಲೋಬೊ ವಹಿಸಲಿದ್ದಾರೆ. ವಾನಿರ್ ಅವರ್ ಲೇಡಿ ಆಫ್ ಮರ್ಸಿ ಚರ್ಚ್‌ನ ಧರ್ಮಗುರು ವಂ. ವಿಕ್ಟರ್ ಡಿಮೆಲ್ಲೊ ಆಶೀರ್ವದಿಸಲಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದು, ಅತಿಥಿಗಳಾಗಿ ವಂ. ನಿಲೇಶ್ ಕ್ಯಾಸ್ತ್ರೊ, ಸಿಸ್ಟರ್ ಮಿಲ್ಲಿ ಫೆರ್ನಾಂಡಿಸ್, ಶ್ರೀಮತಿ ದಿವ್ಯಾ ಸತೀಶ್ ಶೆಟ್ಟಿ ಮತ್ತು ಸಿ.ಎಂ. ಸತ್ತಾರ್ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಎಂಸಿಐ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ಉಪಾಧ್ಯಕ್ಷ ಜೆರಾಲ್ಡ್ ಜೋಡ್ ಡಿಸೋಜ, ನಿರ್ದೇಶಕರಾದ ಆಂಡ್ರ್ಯೂ ಡಿಸೋಜ, ಡಾ. ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ, ಜೆ.ಪಿ. ರೋಡ್ರಿಗಸ್, ಡೇವಿಡ್ ಡಿಸೋಜ, ಎಲ್ರಾಯ್ ಕಿರಣ್ ಕ್ಯಾಸ್ತ್ರೊ, ಹೆರಾಲ್ಡ್ ಮೊಂತೆರೊ, ರೋಷನ್ ಡಿಸೋಜ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ, ಸುಶಾಂತ್ ಸಲ್ದಾನ, ಬರಿನ್ ರೆಬೆಲೊ, ಡಾ. ಫೀದಾ ಡಿಸೋಜ, ಅಲ್ವಿನ್ ಮೊಂತೆರೊ, ಫೆಲಿಕ್ಸ್ ಡಿಕ್ರೂಜ್, ಶಮೀಳಾ ಮಿನೇಜಸ್ ಮತ್ತು ಪ್ರಧಾನ ವ್ಯವಸ್ಥಾಪಕ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ