ಮಂಗಳೂರು : ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ಮಂಗಳೂರು ಘಟಕದ ಸಾಮಾನ್ಯ ಸಭೆಯು ಮಂಗಳೂರಿನ ಕೆ.ಪಿ.ಟಿ ಬಳಿ ಇರುವ ಎಸ್. ಕ್ಯೂಬ್ ಸೆಂಟರ್ ಸಭಾಂಗಣದಲ್ಲಿ ಇತ್ತೀಚೆಗೆ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಸಾಮಾನ್ಯ ಸಭೆಯ ನಂತರ ಜರುಗಿದ ಮುಂದಿನ 2026-28 ನೇ ಸಾಲಿನ ಅವಧಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಘಟಕದ ನೂತನ ಅಧ್ಯಕ್ಷರಾಗಿ ಶ್ರೀ ಮುರಳಿ ಹೊಸಮಜಲು ಹಾಗೂ ಕಾರ್ಯದರ್ಶಿಯಾಗಿ ವಿ.ಎಮ್. ಸತೀಶನ್ ಅವರು ಸರ್ವಾನುಮತದಿಂದ ಪುನರಾಯ್ಕೆಗೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಘಟಕದ ಇತರೆ ಪ್ರಮುಖ ಪದಾಧಿಕಾರಿಗಳನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದ್ದು, ಖಜಾಂಚಿಯಾಗಿ ಶ್ರೀ ಅಜಯಕುಮಾರ್, ಉಪಾಧ್ಯಕ್ಷರಾಗಿ ಶ್ರೀಮತಿ ವಾಸಂತಿ ನಾಯರ್, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಮಂಜು ಅಜಿತ್ ಮತ್ತು ಜತೆ ಖಜಾಂಚಿಯಾಗಿ ರವೀಂದ್ರನಾಥ್ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇನ್ನುಳಿದಂತೆ ಬೋರ್ಡ್ ಮೆಂಬರುಗಳಾಗಿ ಶ್ರೀ ವಿಜಯಕುಮಾರ್, ಎಮ್.ವಿ. ರಾಜನ್, ಎ.ಎಸ್. ಮೋಹನ್ ರವರು ಹಾಗೂ ಸಮಿತಿಯ ಸಕ್ರಿಯ ಸದಸ್ಯರಾಗಿ ಶ್ರೀ ಜೋತಿಷ್ ಕುಮಾರ್, ಶ್ರೀಮತಿ ಜಯಲಕ್ಷ್ಮೀ ಚಂದ್ರಮೋಹನ್, ಶ್ರೀ ಮಣಿಕಂಠನ್, ಶ್ರೀ ವಿನೋದ್ ವಿನೋದ್‌ರಾಜ್, ಹರೀಶ್ ಗೋವಿಂದ್, ದೇವರಾಜ್ ಮತ್ತು ವಿನಯನ್ ನಾಯರ್ ಅವರುಗಳು ನಿಯುಕ್ತಿಗೊಂಡಿದ್ದಾರೆ.
ಇದೇ ವೇಳೆ ಸಂಸ್ಥೆಯ ಮಹಿಳಾ ವಿಭಾಗಕ್ಕೂ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಮಹಿಳಾ ವಿಭಾಗದ ಅಧ್ಯಕ್ಷರಾಗಿ ಶ್ರೀಮತಿ ಸುಜಾತಾ ನಾಯರ್, ಕಾರ್ಯದರ್ಶಿಯಾಗಿ ಶ್ರೀಮತಿ ಶ್ರೀಜಾ ನಂಬಿಯಾರ್ ಹಾಗೂ ಖಜಾಂಚಿಯಾಗಿ ಶ್ರೀ ಗೋಪಿಕಾ ರಾಣಿ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪ್ರಭಾ ವಿಜಯಕುಮಾರ್ ಮತ್ತು ಜತೆಕಾರ್ಯದರ್ಶಿಯಾಗಿ ಅನಿತಾ ಜಯಚಂದ್ರನ್ ಅವರು ಜವಾಬ್ದಾರಿ ಸ್ವೀಕರಿಸಿದ್ದಾರೆ. ಈ ಇಡೀ ಚುನಾವಣಾ ಪ್ರಕ್ರಿಯೆಯನ್ನು ಉಡುಪಿ ಘಟಕದ ಸಜಿ ಪಿಳ್ಳೈ ಅವರು ಚುನಾವಣಾ ಅಧಿಕಾರಿಯಾಗಿ ಹಾಗೂ ಉಡುಪಿಯ ಮೋಹನ್ ದಾಸ್ ಅವರು ವೀಕ್ಷಕರಾಗಿ ಭಾಗವಹಿಸಿ ಯಶಸ್ವಿಯಾಗಿ ನಡೆಸಿಕೊಟ್ಟರು. ನೂತನ ಪದಾಧಿಕಾರಿಗಳ ನೇಮಕಕ್ಕೆ ಸೊಸೈಟಿಯ ಸದಸ್ಯರು ಹರ್ಷ ವ್ಯಕ್ತಪಡಿಸಿ, ಶುಭ ಹಾರೈಸಿದ್ದಾರೆ.