image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಾವು ನಮ್ಮ ಕಲೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕೆನ್ನುವ ನಿಟ್ಟಿನಲ್ಲಿ ಶೃದ್ಧಾ ಭಕ್ತಿಯಿಂದ ಈ ಕಾರ್ಯ ಮಾಡುತ್ತಿದ್ದೇವೆ- ಮಿಥುನ್ ರೈ

ನಾವು ನಮ್ಮ ಕಲೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕೆನ್ನುವ ನಿಟ್ಟಿನಲ್ಲಿ ಶೃದ್ಧಾ ಭಕ್ತಿಯಿಂದ ಈ ಕಾರ್ಯ ಮಾಡುತ್ತಿದ್ದೇವೆ- ಮಿಥುನ್ ರೈ

ಮಂಗಳೂರು: ನಾವು ನಮ್ಮ ಕಲೆ ಅಂತರ್ ರಾಷ್ಟ್ರೀಯ ಬೆಳೆಯಬೇಕೆನ್ನುವ ನಿಟ್ಟಿನಲ್ಲಿ ಶೃದ್ಧಾ ಭಕ್ತಿಯಿಂದ ಈ ಕಾರ್ಯ ಮಾಡುತ್ತಿದ್ದೇವೆ ಎಂದು ಪಿಲಿ ನಲಿಕೆ ಪ್ರತಿಷ್ಠಾನದ ಅದ್ಯಕ್ಷ ಮಿಥುನ್ ರೈ ಹೇಳಿದರು. ಅವರು ನಗರದ ಖಾಸಗಿ ಹೊಟೆಲಿನಲ್ಲಿ ನಡೆದ ಪಿಲಿನಲಿಕೆ ಪ್ರತಿಷ್ಠಾನ (ರಿ.) ಹಾಗೂ ನಮ್ಮ ಟಿವಿಯ ಸಹಯೋಗದಲ್ಲಿ ನಡೆಯಲಿರುವ ಪಿಲಿನಲಿಕೆ- 9 ರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತುಳುನಾಡಿನ ಸಾಂಪ್ರದಾಯಿಕ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಹುಲಿ ವೇಷದ ಸಂಪ್ರದಾಯ ಹಾಗೂ ಮೂಲ ಸೊಗಡನ್ನ ಉಳಿಸಿ ಬೆಳೆಸಿ ಪೋಷಿಸುವ ನಿಟ್ಟಿನಲ್ಲಿ ಒಂಬತ್ತು ವರ್ಷಗಳ ಹಿಂದೆ ಪಿಲಿ ನಲಿಕೆ ಎಂಬ ಸ್ಪರ್ಧೆಯನ್ನು ಆಯೋಜಿಸಿತ್ತು.

ಈ ಕಾರ್ಯಕ್ರಮ ಅದ್ಭುತ ಯಶಸ್ಸನ್ನು ಕಂಡಿದ್ದು ನಮ್ಮ ಮೂಲ ಆಶಯ ಸಾಕಾರಗೊಂಡಿದ್ದು,  ಮಾತ್ರವಲ್ಲದೆ ವಿಶ್ವ ಮನ್ನಣೆ ಗಳಿಸಿತ್ತು. ಸಂತಸದ ವಿಚಾರವೆಂದರೆ ಅಲ್ಲಲ್ಲಿ ಹುಲಿ ವೇಷದ ಸ್ಪರ್ಧೆಗಳು ಆರಂಭವಾಯಿತು. ಇದೀಗ ಪಿಲಿ ನಲಿಕೆ ಸ್ಪರ್ಧೆಯ ಒಂಬತ್ತನೇ ಆವೃತ್ತಿ ಅಕ್ಟೋಬರ್ 12 ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗಲಿದೆ.

ಈ ಬಾರಿ ಸ್ಪರ್ಧಾ ಕಣದಲ್ಲಿ. ಆಹ್ವಾನಿತ ಪ್ರತಿಷ್ಠಿತ 11 ಹುಲಿ ವೇಷ ತಂಡಗಳು ಭಾಗವಹಿಸಲಿರುವುದು ಎಂದರು.  ಪಿಲಿನಲಿಕೆ -9 ರಲ್ಲಿ ಪ್ರಥಮ ಸ್ಥಾನಕ್ಕೆ ರೂಪಾಯಿ 5 ಲಕ್ಷ, ದ್ವಿತೀಯ ಸ್ಥಾನಕ್ಕೆ ರೂಪಾಯಿ ಮೂರು ಲಕ್ಷ, ಹಾಗೂ ತೃತೀಯ ಸ್ಥಾನಕ್ಕೆ ಎರಡು ಲಕ್ಷ ನಗದು ಬಹುಮಾನ ಹಾಗೂ ಟ್ರೋಫಿಯನ್ನು ನೀಡಲಾಗುವುದು. ವೈಯಕ್ತಿಕ ವಿಭಾಗದಲ್ಲಿ ಮರಿ ಹುಲಿ, ಕಿರಿ ಹುಲಿ, ಉತ್ತಮ ಬಣ್ಣ ಗಾರಿಕೆ, ಉತ್ತಮ ತಾಸೆ, ಧರಣಿ ಮಂಡಲ, ಅಕ್ಕಿಮುಡಿ ಹಾರಿಸುವುದು ಇವುಗಳಿಗೆ ತಲಾ 50,000ಗಳ ಪ್ರಶಸ್ತಿಯನ್ನು ನೀಡಲಾಗುವುದು.

ಮಾತ್ರವಲ್ಲ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ತಂಡಕ್ಕೆ 50,000 ಯನ್ನು ಪ್ರೋತ್ಸಾಹಕ ಧನವನ್ನಾಗಿ ನೀಡಲಾಗುವುದು ಎಂದರು. ಈ ಕಾರ್ಯಕ್ರಮದಲ್ಲಿ ಈ ಬಾರಿಯ ರಾಷ್ಟ್ರ ಪ್ರಶಸ್ತಿಗಳನ್ನ ಬಾಚಿಕೊಂಡ ಕಾಂತಾರ ಸಿನಿಮಾದ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಸನ್ಮಾನ ಕಾರ್ಯಕ್ರಮವೂ ಇದೆ. ಬಾಲಿವುಡ್ ನ  ಅಹನ್ ಶೆಟ್ಟಿ, ಡಾಲಿ ದನಂಜಯ್ ಸೇರಿದಂತೆ ಕನ್ನಡ ತುಳು ಹಿಂದಿ ಭಾಷೆಯ ಚಲನಚಿತ್ರ ನಟ ನಟಿಯರು, ಭಾರತೀಯ ಕ್ರಿಕೆಟ್ ತಂಡದ ಸವ್ಯಸಾಚಿ ಶಿವಂ, ಹುಬೆ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರು ಗಣ್ಯರು ಈ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಮ್ಮ ಟಿವಿ ಮುಖ್ಯಸ್ಥ ಡಾ. ಶಿವಶರಣ್ ಶೆಟ್ಟಿ, ವಿಕಾಶ್ ಶೆಟ್ಟಿ, ಅವಿನಾಶ್ ಮತ್ತು ನವೀನ್ ಶೆಟ್ಟಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ