image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮನೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ ಮಹಿಳೆಗೆ ಧನಸಹಾಯ ನೀಡಿ ಧೈರ್ಯ ತುಂಬಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ

ಮನೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ ಮಹಿಳೆಗೆ ಧನಸಹಾಯ ನೀಡಿ ಧೈರ್ಯ ತುಂಬಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ

ಮಂಗಳೂರು : ಮನೆ ಕುಸಿತದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಆಕಾಶಭವನದ ಕಾಪಿಗುಡ್ಡೆ ನಿವಾಸಿ ಶ್ರೀಮತಿ ಭವಾನಿ ಅವರ ನಿವಾಸಕ್ಕೆ ಇಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಭೇಟಿ ನೀಡಿ, ಸಂತ್ರಸ್ತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಭವಾನಿ ಅವರ ನೋವು, ಸಂಕಷ್ಟ ಹಾಗೂ ಅವರು ಪ್ರಸ್ತುತ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಅತ್ಯಂತ ಕಾಳಜಿಯಿಂದ ಆಲಿಸಿದ ಇನಾಯತ್ ಅಲಿ ಅವರು, ಮನೆ ಕುಸಿತದಿಂದ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಒಂದು ಮನೆಯ ನಷ್ಟ ಎಂದರೆ ಕೇವಲ ಇಟ್ಟಿಗೆ, ಸಿಮೆಂಟ್ ಕಟ್ಟಡದ ನಷ್ಟವಲ್ಲ. ಅದು ಆ ಕುಟುಂಬದ ಭದ್ರತೆ, ನೆಮ್ಮದಿ ಮತ್ತು ಅವರ ಬದುಕಿನ ಕನಸುಗಳಿಗೆ ಉಂಟಾಗುವ ದೊಡ್ಡ ಆಘಾತವಾಗಿದೆ ಎಂದು ಅವರು ಬೇಸರ ಹಂಚಿಕೊಂಡರು.

ಸಂಕಷ್ಟದಲ್ಲಿರುವ ಆ ಕುಟುಂಬಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ಇನಾಯತ್ ಅಲಿ ಅವರು ತಕ್ಷಣವೇ ತಮ್ಮ ವೈಯಕ್ತಿಕ ವತಿಯಿಂದ ₹50 ಸಾವಿರ ಆರ್ಥಿಕ ಧನಸಹಾಯವನ್ನು ಹಸ್ತಾಂತರಿಸಿದರು. ಇದಷ್ಟೇ ಅಲ್ಲದೆ, ತಕ್ಷಣವೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಸಂತ್ರಸ್ತ ಕುಟುಂಬಕ್ಕೆ ನಿಯಮಾನುಸಾರ ಸಿಗಬೇಕಾದ ಅಗತ್ಯ ಸರ್ಕಾರಿ ನೆರವು, ಪರಿಹಾರ ಮತ್ತು ಸೌಲಭ್ಯಗಳನ್ನು ಯಾವುದೇ ವಿಳಂಬವಿಲ್ಲದೆ ತ್ವರಿತವಾಗಿ ಒದಗಿಸುವಂತೆ ಕಟ್ಟುನಿಟ್ಟಿನ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ