ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಹಾಗೂ ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿಮಿಟೆಡ್ ಮಂಗಳೂರು ಇವರ ಸಹಯೋಗದಲ್ಲಿ ಉಚಿತ ಕಿವಿ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶಿಬಿರವು ಜೂನ್ 10, 2026ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಮಂಗಳೂರಿನ ಲಷ್ಮೀ ಕ್ಲಿನಿಕ್, ಫ್ಲವರ್ ಮಾರ್ಕೆಟ್ ರಸ್ತೆ, ಕಾರ್ ಸ್ಟ್ರೀಟ್‌ನಲ್ಲಿ ನಡೆಯಲಿದೆ. ಖ್ಯಾತ ವೈದ್ಯೆ ಡಾ. ಜ್ಯೋತಿ ಕೆ. (BAMS, MD-Ayu) ಅವರ ನೇತೃತ್ವದಲ್ಲಿ ಶಿಬಿರ ನಡೆಯಲಿದ್ದು, ಹಿರಿಯ ನಾಗರಿಕರು ಹಾಗೂ ಶ್ರವಣ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉಚಿತ ತಪಾಸಣೆಯ ಸೌಲಭ್ಯ ಕಲ್ಪಿಸಲಾಗಿದೆ.
ಶಿಬಿರದಲ್ಲಿ ಕಿವಿಯ ಶ್ರವಣ ಸಾಮರ್ಥ್ಯ ಪರೀಕ್ಷೆ ನಡೆಸಲಾಗುವುದು. ಅಗತ್ಯವಿರುವ ಫಲಾನುಭವಿಗಳಿಗೆ ಶ್ರವಣ ಯಂತ್ರ (ಹಿಯರಿಂಗ್ ಮೆಷಿನ್) ಖರೀದಿಗೆ ವಿಶೇಷ ಸಹಾಯಧನ ನೀಡಲಾಗುತ್ತದೆ. ಶ್ರವಣ ಯಂತ್ರದ ಮೇಲೆ ಶೇ.40 ರಷ್ಟು ರಿಯಾಯಿತಿ ಸೌಲಭ್ಯವೂ ಲಭ್ಯವಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಶ್ರವಣ ಸಮಸ್ಯೆ ಇರುವವರು ತಮ್ಮ ಹಳೆಯ ವೈದ್ಯಕೀಯ ವರದಿಗಳನ್ನು (ಓಲ್ಡ್ ರಿಪೋರ್ಟ್) ತರಲು ಸೂಚಿಸಲಾಗಿದೆ. 30 ವರ್ಷ ಮೇಲ್ಪಟ್ಟವರು ಹಾಗೂ ಕಿವಿ ಕೇಳುವಿಕೆಯಲ್ಲಿ ತೊಂದರೆ ಅನುಭವಿಸುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8951804399 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.