ಮಂಗಳೂರು : ಮಂಗಳೂರು ವಕೀಲರ ಸಂಘಕ್ಕೆ ನಡೆದ 2026-28ರ ಸಾಲಿನ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ನ್ಯಾಯವಾದಿ ಜಗದೀಶ್ ಕೆ. ಶೇಣವ ಅವರು ನೂತನ ಅಧ್ಯಕ್ಷರಾಗಿ ಭರ್ಜರಿ ಜಯ ಗಳಿಸಿದ್ದಾರೆ. ಈ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು 1246 ಮತಗಳ ಪೈಕಿ ಜಗದೀಶ್ ಶೇಣವ ಅವರು 673 ಮತಗಳನ್ನು ಪಡೆಯುವ ಮೂಲಕ ವಿಜಯಶಾಲಿಯಾಗಿದ್ದಾರೆ.
ಉಳಿದಂತೆ ಸಂಘದ ಪ್ರಮುಖ ಪದಾಧಿಕಾರಿಗಳ ಆಯ್ಕೆಯೂ ನಡೆದಿದ್ದು, ಉಪಾಧ್ಯಕ್ಷರಾಗಿ ಪ್ರವೀಣ್ ಕುಮಾರ್ ಅಧ್ಯಪಾಡಿ ಅವರು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಗೌತಮ್ ಬಿ.ಪಿ. ಹಾಗೂ ಜೊತೆ ಕಾರ್ಯದರ್ಶಿಯಾಗಿ ರವಿ ಕುಮಾರ್ ವಿ. ಅವರು ನಿಯುಕ್ತರಾಗಿದ್ದಾರೆ. ಇನ್ನು ಸಂಘದ ಕೋಶಾದಿಕಾರಿಯಾಗಿ ರೇಖಾ ಕೆ. ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ವಕೀಲರ ಸಮೂಹ ಅಭಿನಂದನೆಗಳನ್ನು ಸಲ್ಲಿಸಿದೆ.