ಮಂಗಳೂರು: ಶಕ್ತಿ ಶಿಕ್ಷಣ ಸಂಸ್ಥೆಯು 2018ರಲ್ಲಿ ಪ್ರಾರಂಭವಾಗಿರುವ ಶಿಕ್ಷಣ ಸಂಸ್ಥೆಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆಗಿರುವ ಸಾಧನೆಯನ್ನು ಮಾಡುತ್ತಾ ಬರುತ್ತಿದೆ. ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ, ಸಂಸ್ಕಾರವನ್ನು ನಿರಂತರವಾಗಿ ಕೊಡುತ್ತಾ ಬರುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಭಾರತದ ಸಂಪತ್ತಾಗಬೇಕೆಂಬುದು ಸಂಸ್ಥೆಯ ಉದ್ದೇಶ ಎಂದು ಶಕ್ತಿ ಎಜುಕೇಶನ್ ಟ್ರಸ್ಟಿನ ಪ್ರಧಾನ ಸಲಹೆಗಾರರಾದ ರಮೇಶ್ ಕೆ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿ,
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಲು "ಶಕ್ತಿ ಫೆಸ್ಟ್" ಎನ್ನುವ ವೇದಿಕೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಶಾಲೆ ಮತ್ತು ಕಾಲೇಜಿನಲ್ಲಿ 8ನೇ ತರಗತಿಯಿಂದ 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಕಲೆ, ಸಾಂಸ್ಕೃತಿಕ ಪ್ರತಿಭೆಯನ್ನು ಗುರುತಿಸುವ ಕಾರ್ಯವನ್ನು ಮಾಡುತ್ತಿದೆ. ದಿನಾಂಕ 16.11.2024ರಂದು ಶಕ್ತಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಸುಮಾರು 14 ಸ್ಪರ್ಧೆಗಳನ್ನು ಆಯೋಜಿಸಿದೆ. ಇದರಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ನಗದು ಹಾಗೂ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು ಎಂದರು. ಪಿಯುಸಿ ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧೆ, ಉತ್ಪನ್ನ ಬಿಡುಗಡೆ (ಶಾರ್ಕ್ ಟ್ಯಾಂಕ್), ರಂಗೋಲಿ ವಿಷಯ: ನವರಾತ್ರಿ, ಮುಖವರ್ಣಿಕೆ ವಿಷಯ: ಡ್ರಗ್ ಅಬ್ಯುಸ್, ಹೂಗುಚ್ಚ ತಯಾರಿ. ರೀಲ್ ಮೇಕಿಂಗ್. ಏಕ ವ್ಯಕ್ತಿ ಗಾಯನ - ಭಾವಗೀತೆ,
ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಜನಪದ ಕುಣಿತ. ಪೋಸ್ಟರ್ ಮೇಕಿಂಗ್ ಥೀಮ್: ಸೈಬರ್ ಸೆಕ್ಯುರಿಟಿ, ಪೆನ್ಸಿಲ್ ಸ್ಕೆಚ್, ವಿಜ್ಞಾನ ಮಾದರಿ ಥೀಮ್: ಪರಿಸರ ಸ್ನೇಹಿ ನವ ಅವಿಷ್ಕಾರ. ಬೀದಿ ನಾಟಕ ಸ್ಪರ್ಧೆ ಏಕವ್ಯಕ್ತಿ ಗಾಯನ ಸ್ಪರ್ಧೆ, ವಿಷಯ: ಭಾವಗೀತೆ. ಥೀಮ್: ಸಾಮಾಜಿಕ ಕಳಕಳಿ, ನಿಧಿ ಬೇಟೆ ಎಂದರು.
ಅಭ್ಯರ್ಥಿಗಳಿಗೆ ಸಾಮಾನ್ಯ ನಿಯಮಗಳು, ಸ್ಪರ್ಧೆಗಳನ್ನು ಪ್ರೌಢ ಶಾಲಾ ಹಾಗೂ ಪದವಿಪೂರ್ವ ಎರಡು ಹಂತಗಳಲ್ಲಿ ನಡೆಸಲಾಗುವುದು. ಒಂದು ಶಾಲೆ/ಕಾಲೇಜಿನಿಂದ ಕೇವಲ ಒಂದು ತಂಡಕ್ಕೆ ಮಾತ್ರ ಅವಕಾಶ. ಒಬ್ಬ ವಿದ್ಯಾರ್ಥಿಯು ತಲಾ ಎರಡು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ. ಸ್ಪರ್ಧೆಯಲ್ಲಿ ತಂಡದ ಸದಸ್ಯರ ಗರಿಷ್ಠ ಮಿತಿ 25. ಭಾಗವಹಿಸುವ ತಂಡವು ಕಾಲೇಜಿನ ಪ್ರಾಂಶುಪಾಲರು/ ಮುಖ್ಯೋಪಾಧ್ಯಾಯರ ಅನುಮತಿ (ಒಪ್ಪಿಗೆ) ಪತ್ರದೊಂದಿಗೆ ಹಾಜರಿರಬೇಕು. ಸ್ಪರ್ಧೆಗೆ ಭಾಗವಹಿಸುವ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರ ಹಾಗೂ ಶಾಲಾ ಪಡಿಯನ್ನು ಧರಿಸಿ 4.30 ಕ್ಕೆ ನೋಂದಾವಣೆ ಸ್ಥಳದಲ್ಲಿ ಹಾಜರಿರಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ತಲಾ 100 ರೂಪಾಯಿಯಂತೆ ನೋಂದಾವಣಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧೆಗೆ ಹಾಜರಾಗುವ ತಂಡವು ತಮ್ಮ ಪೆನ್ ಡ್ರೈವ್ ನ್ನು ತಮ್ಮ ಶಾಲೆ/ಕಾಲೇಜು ಹೆಸರಿನಲ್ಲಿ ಮರು ಹೊಂದಿಸಿ ಸ್ಪರ್ಧೆಯ ಉಸ್ತುವಾರಿ ವಹಿಸಿಕೊಂಡವರಿಗೆ ನೀಡತಕ್ಕದ್ದು, ನೀರು, ಬೆಂಕಿ, ಪ್ರಾಣಿ ಹಾಗೂ ಸ್ಪೋಟಕ ವಸ್ತುಗಳ ಬಳಕೆ ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿ, ಧರ್ಮ, ವರ್ಗ, ಸಮುದಾಯದ ಭಾವನೆಗೆ ಧಕ್ಕೆ ತರುವಂತಹ ಅವಹೇಳನಕಾರಿ ವಿಚಾರವನ್ನು ನಿಷೇಧಿಸಲಾಗಿದೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದೆ. ಸ್ಪರ್ಧೆಗೆ ಹೆಸರು ನೋಂದಾಯಿಸಲು ಕಡೆಯ ದಿನಾಂಕ 11-11-2024, 13. ಆಯೋಜಕರು ಸ್ಪರ್ಧೆಯ ಸಮಯ. ಕಾಲಾವಕಾಶವನ್ನು ಬದಲಾಯಿಸುವ ಹಕ್ಕನ್ನು ಹೊಂದಿರುತ್ತಾರೆ ಎಂದು ಮಾಹಿತಿ ನೀಡಿದರು. ಮಾಹಿತಿಗಾಗಿ Shakthi.edu.in 2 : fest@shakthi.edu.in ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಮತಿ ಬಬಿತ ಸೂರಜ್ ಪ್ರಾಂಶುಪಾಲರು ಶಕ್ತಿ ರೆಸಿಡೆನ್ಸಿಯಲ್ ಶಾಲೆ, ವೆಂಕಟೇಶ ಮೂರ್ತಿ ಹೆಚ್ ಪ್ರಾಂಶುಪಾಲರು ಶಕ್ತಿ ಪದವಿ ಪೂರ್ವ ಕಾಲೇಜು ಮತ್ತು ಸಬಿತಾ ಕಾಮತ್ ಉಪಸ್ಥಿತರಿದ್ದರು.