image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರುಡ್‌ಸೆಟ್ ಸಂಸ್ಥೆಯಿಂದ ಉಚಿತ ಕಂಪ್ಯೂಟರ್ ಡಿಟಿಪಿ ತರಬೇತಿ: ಉಚಿತ ವಸತಿ ಹಾಗೂ ಊಟದ ಸೌಲಭ್ಯ

ರುಡ್‌ಸೆಟ್ ಸಂಸ್ಥೆಯಿಂದ ಉಚಿತ ಕಂಪ್ಯೂಟರ್ ಡಿಟಿಪಿ ತರಬೇತಿ: ಉಚಿತ ವಸತಿ ಹಾಗೂ ಊಟದ ಸೌಲಭ್ಯ

ಉಜಿರೆ : ಗ್ರಾಮೀಣ ಭಾಗದ ಯುವಜನರು ಹಾಗೂ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವ ಉದ್ದೇಶದಿಂದ ಉಜಿರೆಯ ರುಡ್‌ಸೆಟ್ ಸಂಸ್ಥೆಯು ೪೫ ದಿನಗಳ ಉಚಿತ ಕಂಪ್ಯೂಟರ್ ಡಿಟಿಪಿ (DTP) ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮಾನ್ಯತೆ ಪಡೆದ, ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಹಾಗೂ ಕೆನರಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯು ಜೂನ್ ೦೮ ರಿಂದ ಜುಲೈ ೨೨ರವರೆಗೆ ಈ ತರಬೇತಿಯನ್ನು ಆಯೋಜಿಸಿದೆ.

ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಮೂಲಭೂತ ಜ್ಞಾನ, ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್, ಎಂಎಸ್ ಆಫೀಸ್, ಡಿಟಿಪಿ, ಡಿಸೈನಿಂಗ್ ಹಾಗೂ ಸ್ವಉದ್ಯೋಗಕ್ಕೆ ಪೂರಕವಾದ ಪ್ರಾಯೋಗಿಕ ಮಾಹಿತಿಗಳನ್ನು ನೀಡಲಾಗುತ್ತದೆ. ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೆಂದರೆ ತರಬೇತಿ ಪಡೆಯುವ ಎಲ್ಲಾ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ಸಂಸ್ಥೆಯೇ ಕಲ್ಪಿಸಲಿದೆ.

೧೮ ರಿಂದ ೫೦ ವರ್ಷದೊಳಗಿನ, ಕನ್ನಡ ಓದು ಮತ್ತು ಬರಹ ತಿಳಿದಿರುವ ಹಾಗೂ ಸ್ವಉದ್ಯೋಗ ಅಥವಾ ಉದ್ಯೋಗದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಉಜಿರೆಯ ಸಿದ್ಧವನದಲ್ಲಿರುವ ರುಡ್‌ಸೆಟ್ ಸಂಸ್ಥೆಯಲ್ಲಿ ತರಬೇತಿ ನಡೆಯಲಿದ್ದು, ಸೀಮಿತ ಅವಕಾಶಗಳು ಇರುವುದರಿಂದ ಆಸಕ್ತರು ತಕ್ಷಣವೇ ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಲಿಂಕ್ (https://forms.gle/9LUE1UvHMAv21vRS7) ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳಾದ 6364561982, 8296770307, 9980885900, 9448348569 ಹಾಗೂ ದೂರವಾಣಿ ಸಂಖ್ಯೆ 08256-236404 ಅನ್ನು ಸಂಪರ್ಕಿಸಬಹುದಾಗಿದೆ.

Category
ಕರಾವಳಿ ತರಂಗಿಣಿ