ಮಂಗಳೂರು: ನಮ್ಮ ನಗರ ಎಲ್ಲಾ ರೀತಿಯಲ್ಲಿ ಬೆಲೆಯುತ್ತಿದೆ. ಅದರಲ್ಲೂ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಮಂಗಳೂರು ವೇಗವಾಗಿ ಬೆಳೆಯುತ್ತಿದೆ. ಜನರಿಗೆ ಸ್ವಂತ ಮನೆ ಬೇಕು ಎಂಬ ಕನಸಿಗೆ ಇಂಬುಕೊಡುವಂತಹ ಕೆಲಸವನ್ನು ಕಟ್ಟಡ ನಿರ್ಮಾಣ ಸಂಸ್ಥೆಗಳು ಮಾಡುತ್ತಿದ್ದು, ಜನರ ಬಜೆಟ್ ಗೆ ತಕ್ಕಂತ ಮನೆಗಳ ನಿರ್ಮಾಣ ಕೆಲಸ ಆಗುತ್ತಿದೆ. ಆರ್ಥಿಕವಾಗಿ ಬೆಳೆಯಲು ಸಾಕಷ್ಟು ಅವಕಾಶಗಳು ಇಲ್ಲಿ ಇದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು. ಅವರು ನಗರದಲ್ಲಿ ಪೂರ್ವಿ ಹೌಸಿಂಗ್ ಡೆವಲಪ್ ಮೆಂಟ್ ಕಂಪನಿ ಪ್ರೈವೆಟ್ ಲಿಮಿಟೆಡ್ ನ ಪೂರ್ವಿ ಎಸ್ಟೀಲಾದ ಐಶಾರಾಮಿ ಅಪಾರ್ಟ್ ಮೆಂಟ್ ನ ಪೋಸ್ಟರ್ ಬಿಡುಗಡೆ ಗೊಳಿಸಿದ ನಂತರ ಮಾತನಾಡಿ, ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಸಾಕಷ್ಟು ಮಟ್ಟದಲ್ಲಿ ಕ್ರಾಂತಿ ಆಗುತ್ತಿದ್ದು, ಇದೀಗ ಮಂಗಳೂರಿಗೆ ಹೊಸ ಯೋಜನೆಯೊಂದಿಗೆ ಪೂರ್ವಿ ಹೌಸಿಂಗ್ ನವರು ಅಡಿ ಇಟ್ಟಿದ್ದಾರೆ. ಈ ಯೋಜನೆಯ ಜತೆಗೆ ಅವರಿಗೆ ಇನ್ನಷ್ಟು ಅವಕಾಶಗಳು ಸಿಗಲಿ.
ನಮ್ಮ ಮಂಗಳೂರು ಪರಶುರಾಮನ ಸೃಷ್ಟಿ, ಶಿಕ್ಷಣ, ಪ್ರವಾಸೋದ್ಯಮ, ವೈದ್ಯಕೀಯ ಕ್ಷೇತ್ರಗಳಲ್ಲಿ ಮುಂಚೂಣಿ ಸ್ಥಾನದಲ್ಲಿ ಇದೆ. ನಮ್ಮಲ್ಲಿ ಏಳು ಮೆಡಿಕಲ್ ಕಾಲೇಜು ಇದೆ. ಸಾಕಷ್ಟು ಉದ್ದಿಮಗಳನ್ನು ಆಕರ್ಷಣೆ ಮಾಡುವ ಎಲ್ಲ ಸೌಲಭ್ಯಗಳು ಮಂಗಳೂರಿನಲ್ಲಿ ಇವೆ. ಪೂರ್ವಿ ಹೌಸಿಂಗ್ ಸಂಸ್ಥೆ ಮಂಗಳೂರಿಗೆ ಕಟ್ಟಡ ನಿರ್ಮಾಣಕ್ಕೆ ಬಂದಿರುವುದು ಸಂತಸ ಎಂದರು. ಪೂರ್ವಿ ಹೌಸಿಂಗ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಎಸ್ ನಾಯಕ್ ಅವರು ಮಾತನಾಡಿ, ಕಟ್ಟಡ ನಿರ್ಮಾಣಕ್ಕೆ ಕ್ಷೇತ್ರಕ್ಕೆ ಬಂದು 2 ದಶಕಗಳು ಆಗಿದ್ದು, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ಕಡೆಗಳಲ್ಲಿ ಸಾಕಷ್ಟು ಫ್ಲ್ಯಾಟ್ ಗಳನ್ನು ನಿರ್ಮಾಣ ಮಾಡಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ಮನೆಗಳನ್ನು ವಾಸಕ್ಕೆ ನಿರ್ಮಾಣ ಮಾಡಿದ್ದೇವೆ. ಮಂಗಳೂರಿಗೆ ಒಂದು ಹೊಸ ಯೋಜನೆಯನ್ನು ತೆಗೆದುಕೊಂಡು ಬಂದಿದ್ದೇವೆ. ಇಂದಿನಿಂದ ಬುಕಿಂಗ್ ಪ್ರಾರಂಬಿಸುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಹೌಸಿಂಗ್ ಪ್ರಾಜೆಕ್ಟ್ ಹೆಡ್ ಪ್ರಕಾಶ್ ಕುಮಾರ್, ಹರ್ಷಿತ್ ನೋಂಡಾ, ಡೈಜಿ ವರ್ಲ್ಡ್ ಮುಖ್ಯಸ್ಥ ವಾಲ್ಟರ್ ನಂದಳಿಕೆ, ಶಿವಕುಮಾರ್ ಶರ್ಮ ಉಪಸ್ಥಿತರಿದ್ದರು.