image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾರಿಂಜ ದೇವಸ್ಥಾನದ ಸಮಿತಿ ಸದಸ್ಯನ ವಿರುದ್ಧ ಹಸು ಮಾರಾಟ ವಂಚನೆ ಆರೋಪ: ಪೊಲೀಸರಿಗೆ ಹಿಂದು ಜಾಗರಣ ವೇದಿಕೆ ದೂರು

ಕಾರಿಂಜ ದೇವಸ್ಥಾನದ ಸಮಿತಿ ಸದಸ್ಯನ ವಿರುದ್ಧ ಹಸು ಮಾರಾಟ ವಂಚನೆ ಆರೋಪ: ಪೊಲೀಸರಿಗೆ ಹಿಂದು ಜಾಗರಣ ವೇದಿಕೆ ದೂರು

ಬಂಟ್ವಾಳ : ಶ್ರೀ ಕ್ಷೇತ್ರ ಕಾರಿಂಜ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಸಾರ್ವಜನಿಕರಿಗೆ ಹಸುಗಳನ್ನು ಮಾರಾಟ ಮಾಡಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಕುಟುಂಬಗಳು ದೂರು ನೀಡಿದ್ದವು. ಆದರೆ, ದೂರು ನೀಡಿ ಆರು ದಿನಗಳು ಕಳೆದರೂ ಪೊಲೀಸರು ಈವರೆಗೆ ಯಾವುದೇ ಪ್ರಕರಣ ದಾಖಲಿಸದ ಹಿನ್ನೆಲೆಯಲ್ಲಿ ಹಿಂದು ಜಾಗರಣ ವೇದಿಕೆಯ ಪ್ರಮುಖರು ಬಂಟ್ವಾಳ ವಿಭಾಗದ ಉಪ ಪೊಲೀಸ್ ಅಧೀಕ್ಷಕರನ್ನು (ಡಿವೈಎಸ್‌ಪಿ) ಭೇಟಿ ಮಾಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆಯ ನ್ಯಾಯ ಜಾಗರಣ ಪ್ರಮುಖ್ ಹಾಗೂ ವಕೀಲರಾದ ರಾಜೇಶ್ ಬೊಲ್ಲುಕಲ್ಲು, ಪ್ರಾಂತ ಕಾರ್ಯಕಾರಿಣಿ ಸದಸ್ಯ ಪ್ರಶಾಂತ್ ಕೆಂಪುಗುಡ್ಡೆ, ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಮತ್ತು ಪ್ರಮುಖರಾದ ಪುಷ್ಪರಾಜ್ ಕಮ್ಮಾಜೆ ಹಾಗೂ ಅನೂಪ್ ಮಯ್ಯ ಉಪಸ್ಥಿತರಿದ್ದರು. ಸಾರ್ವಜನಿಕರಿಗೆ ವಂಚಿಸಿರುವ ಆರೋಪಿಯ ವಿರುದ್ಧ ಕಾನೂನು ರೀತ್ಯಾ ಸೂಕ್ತ ತನಿಖೆ ನಡೆಸಿ, ನೊಂದ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ನಿಯೋಗವು ಈ ವೇಳೆ ಪೊಲೀಸ್ ಅಧಿಕಾರಿಗಳಿಗೆ ಆಗ್ರಹಿಸಿತು.

Category
ಕರಾವಳಿ ತರಂಗಿಣಿ