image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಶ್ವ ರಕ್ತದಾನಿಗಳ ದಿನ: ಜಿಲ್ಲೆಯ ಸಾಧಕ ರಕ್ತದಾನಿಗಳಿಗೆ ಸನ್ಮಾನಿಸಲು ರೆಡ್‌ಕ್ರಾಸ್ ಸಂಸ್ಥೆಯಿಂದ ಅರ್ಜಿ ಆಹ್ವಾನ

ವಿಶ್ವ ರಕ್ತದಾನಿಗಳ ದಿನ: ಜಿಲ್ಲೆಯ ಸಾಧಕ ರಕ್ತದಾನಿಗಳಿಗೆ ಸನ್ಮಾನಿಸಲು ರೆಡ್‌ಕ್ರಾಸ್ ಸಂಸ್ಥೆಯಿಂದ ಅರ್ಜಿ ಆಹ್ವಾನ

ಮಂಗಳೂರು: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯು ಜೂನ್ 14ರಂದು 'ವಿಶ್ವ ರಕ್ತದಾನಿಗಳ ದಿನ'ವನ್ನು ಆಚರಿಸಲಿದ್ದು, ಈ ಸಂದರ್ಭದಲ್ಲಿ ಜಿಲ್ಲೆಯ ಸಾಧಕ ರಕ್ತದಾನಿಗಳನ್ನು ಸನ್ಮಾನಿಸಲು ನಿರ್ಧರಿಸಿದೆ.

​ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳನ್ನು ಗುರುತಿಸಿ ಜಿಲ್ಲಾ ಮಟ್ಟದಲ್ಲಿ ಗೌರವಿಸಲಾಗುವುದು. ಅಲ್ಲದೆ, ಜಿಲ್ಲೆಯಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಓರ್ವ ರಕ್ತದಾನಿಯನ್ನು ಕರ್ನಾಟಕ ರಾಜ್ಯ ರೆಡ್‌ಕ್ರಾಸ್ ಶಾಖೆಯ ವತಿಯಿಂದ ಬೆಂಗಳೂರಿನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಗೌರವಿಸಲಾಗುತ್ತದೆ.

ಈ ಸನ್ಮಾನಕ್ಕೆ ಅರ್ಹರಾಗಲು, 10 ಅಥವಾ ಅದಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿರುವ ದಕ್ಷಿಣ ಕನ್ನಡ ಜಿಲ್ಲೆಯ ರಕ್ತದಾನಿಗಳು ತಮ್ಮ ರಕ್ತದಾನದ ದಾಖಲೆಗಳನ್ನು ಜೂನ್ 6ರ ಒಳಗಾಗಿ ಸಲ್ಲಿಸಬೇಕು. ಈ ಹಿಂದೆ ರೆಡ್‌ಕ್ರಾಸ್ ಸಂಸ್ಥೆಯಿಂದ ರಕ್ತದಾನಕ್ಕಾಗಿ ಸನ್ಮಾನಿತರಾದವರು ಈ ಆಯ್ಕೆಗೆ ಅರ್ಹರಾಗಿರುವುದಿಲ್ಲ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ದಾಖಲೆ ಸಲ್ಲಿಸಬೇಕಾದ ವಿಳಾಸ:
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಶಾಖೆ, "ಶತಮಾನೋತ್ಸವ ಕಟ್ಟಡ", ಹಳೇ ಜಿಲ್ಲಾಧಿಕಾರಿ ಕಚೇರಿ ಆವರಣ, ಓಲ್ಡ್ ಪೋರ್ಟ್ ರೋಡ್, ಮಂಗಳೂರು - 575001.
​ಆಸಕ್ತರು ದಾಖಲೆಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮೂಲಕವೂ ಕಳುಹಿಸಬಹುದಾಗಿದೆ.
​ವಾಟ್ಸಪ್: 96068 66210
​ಇ-ಮೇಲ್: ircsdkd@gmail.com

Category
ಕರಾವಳಿ ತರಂಗಿಣಿ