image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್‌ನಲ್ಲಿ ಜಿಯೋ ಮೊಬೈಲ್ ಟವರ್ ಉದ್ಘಾಟನೆ

ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್‌ನಲ್ಲಿ ಜಿಯೋ ಮೊಬೈಲ್ ಟವರ್ ಉದ್ಘಾಟನೆ

ಉಜಿರೆ: ಬೆಳ್ತಂಗಡಿ ಸಮೀಪದ ರೆಂಕೆದಗುತ್ತಿನಲ್ಲಿರುವ ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್‌ನಲ್ಲಿ ಜಿಯೋ ಸಂಸ್ಥೆಯ ನೂತನ ಮೊಬೈಲ್ ಟವರ್ ಅನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರು ಬುಧವಾರ ಉದ್ಘಾಟಿಸಿ ಶುಭ ಹಾರೈಸಿದರು.

ಈ ನೂತನ ಸಂಪರ್ಕ ವ್ಯವಸ್ಥೆಯಿಂದಾಗಿ ಇಂಡಸ್ಟ್ರಿಯಲ್ ಪಾರ್ಕ್‌ನ ನೌಕರರು, ಸ್ಥಳೀಯ ನಿವಾಸಿಗಳು, ವಿದ್ಯಾರ್ಥಿಗಳು ಹಾಗೂ ಸಂದರ್ಶಕರಿಗೆ ಉತ್ತಮ ಗುಣಮಟ್ಟದ ಇಂಟರ್‌ನೆಟ್ ಮತ್ತು ಮೊಬೈಲ್ ಸಂಪರ್ಕ ಲಭ್ಯವಾಗಲಿದೆ. ಅಲ್ಲದೆ, ಇದು ಆನ್‌ಲೈನ್ ಶಿಕ್ಷಣ, ಡಿಜಿಟಲ್ ವಾಣಿಜ್ಯ, ತ್ವರಿತ ಸಂವಹನ, ಸುಗಮ ಉದ್ಯಮ ನಿರ್ವಹಣೆ ಹಾಗೂ ಗ್ರಾಹಕರ ಸೇವೆಗಳ ವಿಸ್ತರಣೆಗೆ ಹೊಸ ಉತ್ತೇಜನ ನೀಡಲಿದೆ.

ಈ ಸಂದರ್ಭದಲ್ಲಿ ಜಿಯೋ ಸಂಸ್ಥೆಯ ಹಿರಿಯ ಅಧಿಕಾರಿ ರಾಜೇಶ್, ಡಿ.ಜಿ.ಎಂ. ಧನಂಜಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಮತ್ತು ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ಧನ ಮೊದಲಾದವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ