image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ನಗರದಲ್ಲಿ ಸುರಕ್ಷತಾ ಸಂಕಲ್ಪ ಜಾಥ

ಮಂಗಳೂರು ನಗರದಲ್ಲಿ ಸುರಕ್ಷತಾ ಸಂಕಲ್ಪ ಜಾಥ

ಮಂಗಳೂರು: ನಗರದ ಬೆಸೆಂಟ್  ಮಹಿಳಾ ಕಾಲೇಜಿನಿಂದ ಪಿವಿಎಸ್ ವೃತ್ತದ ವರೆಗೆ  ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ಬೆಸೆಂಟ್  ಮಹಿಳಾ ಕಾಲೇಜಿನ ಯುವ ರೆಡ್ ಕ್ರಾಸ್  ಘಟಕದ ವತಿಯಿಂದ ಮಂಗಳವಾರ ಸುರಕ್ಷಾ ಸಂಕಲ್ಪ ಜಾಥ ನಡೆಯಿತು.

ಮಂಗಳೂರು ಪೊಲೀಸ್ ಕಮೀಷನರೇಟ್  ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ
 ಸುರಕ್ಷಾ ಜಾಥಾಕ್ಕೆ ಚಾಲನೆ ನೀಡಿ ಮಾತನಾ ಡುತ್ತಾ,ರಸ್ತೆ ಸಂಚಾರ ನಿಯಮದ ಪಾಲನೆ ಯಿಂದ ನಮ್ಮ ಜೀವದ ರಕ್ಷಣೆಯ ಜೊತೆ ಇತರರ ಜೀವವನ್ನು ಉಳಿಸಬಹುದು. ಸಂಚಾರ ನಿಯಮದ ಪಾಲನೆಯಲ್ಲಿ ಎಚ್ಚರ ತಪ್ಪಿದಾಗ ಅಮಾಯಕರು ವಾಹನ ಅಪಘಾತಕ್ಕೀಡಾಗಿ ಬಲಿಯಾದ ಉದಾ
ಹರಣೆಗಳಿವೆ.ನಾಗರೀಕರಿಗೂ ರಸ್ತೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಅಗತ್ಯವಿದೆ. ಇದರಿಂದಲೂ ಸಾಕಷ್ಟು ಅಪಘಾತಗಳನ್ನು ತಪ್ಪಿಸಲು ಸಾಧ್ಯವಿದೆಈ ಹಿನ್ನೆಲೆಯಲ್ಲಿ ಸುರಕ್ಷತಾ ಜಾಥ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಮಂಗಳೂರು ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಭಾಸ್ಕರ ರೈ ಕಟ್ಟ ಅಧ್ಯಕ್ಷ ತೆ ವಹಿಸಿದ್ದರು.

 ಸಮಾರಂಭದಲ್ಲಿಬೆಸೆಂಟ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರವೀಣ್ ಕುಮಾರ್ ಕೆ.ಸಿ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತ ರ ಸಂಘದ ಅಧ್ಯಕ್ಷ ಪುಷ್ಪರಾಜ್. ಬಿ.ಎನ್,
ರೋಟರಿ ಜಿಲ್ಲೆ 3180 ಮಾಜಿ ಗವರ್ನರ್ ರಾಜ ಗೋಪಾಲ್ ರೈ,ರೋಟರಿ ಝೋನಲ್ ಲೆಫ್ಟಿನೆಂಟ್ ರವಿಜಲನ್,ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯ ಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ರೋಟರಿ ಸೆಂಟ್ರಲ್ ನಿಯೋಜಿತ ಅಧ್ಯಕ್ಷ ರವೀಂದ್ರ ಬಿ ಎನ್, ರೋಟರಿ ಪೂರ್ವಾ ಧ್ಯಕ್ಷ ರಾಜೇಶ್ ಶೆಟ್ಟಿ ಮೊದಲಾ ದವರು ಉಪಸ್ಥಿತರಿದ್ದರು.ಬೆಸೆಂಟ್  ಮಹಿಳಾ ಕಾಲೇಜಿನ ಯುವ ರೆಡ್ ಕ್ರಾಸ್  ಘಟಕದ ಕಾರ್ಯಕ್ರಮ ಅಧಿಕಾರಿ ದೀಕ್ಷಿತಾ ಸ್ವಾಗತಿಸಿದರು,ಕಾರ್ಯದರ್ಶಿ ಅಂಚಲ್ ಕೃತಜ್ಞತೆ ಸಲ್ಲಿಸಿದರು.

ಎಸಿಪಿ ಗೀತಾ ಕುಲಕರ್ಣಿ ಹಾಗೂ ಟ್ರಾಫಿಕ್ ಪೊಲೀಸ್  ಸಬ್ ಇನ್ಸಪೆಕ್ಟರ್ ಮಂಜುಳಾ,ಅಸಿಸ್ಟೆಂಟ್ ಸಬ್ ಇನ್ಸಪೆಕ್ಟರ್ ಭುವನೇಶ್ , ಸುರಕ್ಷಾ ಜಾಥದ ಬಗ್ಗೆ ವಿದ್ಯಾರ್ಥಿ ಗಳಿಗೆ ಮಾರ್ಗದ ರ್ಶನ ನೀಡಿದರು.ಬೆಸೆಂಟ್  ಮಹಿಳಾ ಕಾಲೇಜಿನ ಯುವ ರೆಡ್ ಕ್ರಾಸ್  ಘಟಕದ ಸದಸ್ಯರು ಜಾಥದಲ್ಲಿ ಮಾಹಿತಿ ಫಲಕದ ಜೊತೆ ಭಾಗವಹಿಸಿದ್ದರು

Category
ಕರಾವಳಿ ತರಂಗಿಣಿ