ಉಜಿರೆ : ಸ್ವಂತ ಉದ್ಯಮ ಆರಂಭಿಸುವ ಕನಸಿರುವ ಯುವಜನರಿಗೆ ಹಾಗೂ ಕೃಷಿಯಲ್ಲಿ ಹೊಸ ಆದಾಯ ಮಾರ್ಗ ಹುಡುಕುತ್ತಿರುವ ಕೃಷಿ ಬಂಧುಗಳಿಗೆ ರುಡ್ ಸೆಟ್ ಸಂಸ್ಥೆಯು ಒಂದು ಸುವರ್ಣಾವಕಾಶವನ್ನು ಕಲ್ಪಿಸಿಕೊಟ್ಟಿದೆ. ಭಾರತ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಮಾನ್ಯತೆ ಪಡೆದು, ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಹಾಗೂ ಕೆನರಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಈ ವಿಶೇಷ ತರಬೇತಿಯನ್ನು ಆಯೋಜಿಸಲಾಗಿದೆ. 2026ರ ಜೂನ್ 01ರಿಂದ ಜೂನ್ 13ರವರೆಗೆ ಒಟ್ಟು 13 ದಿನಗಳ ಕಾಲ “ಕೃಷಿ ಉದ್ಯಮಿ – ಕೋಳಿ ಸಾಕಾಣಿಕೆ” ಸಂಪೂರ್ಣ ಉಚಿತ ತರಬೇತಿ ಕಾರ್ಯಕ್ರಮವು ಸಂಸ್ಥೆಯ ಆವರಣದಲ್ಲಿ ನಡೆಯಲಿದೆ.
ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಆಧುನಿಕ ಕೋಳಿ ಸಾಕಾಣಿಕೆ ವಿಧಾನಗಳು, ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಗಳಿಸುವ ತಂತ್ರಗಳು, ಮಾರುಕಟ್ಟೆ ವ್ಯವಸ್ಥೆ, ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಸ್ವಯಂ ಉದ್ಯೋಗ ಅವಕಾಶಗಳ ಕುರಿತು ಪ್ರಾಯೋಗಿಕ ಮಾಹಿತಿಗಳನ್ನು ನೀಡಲಾಗುತ್ತದೆ. ತರಬೇತಿಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು 18 ರಿಂದ 50 ವರ್ಷದೊಳಗಿನ ವಯೋಮಿತಿಯವರಾಗಿರಬೇಕು. ಇದರೊಂದಿಗೆ ಕನ್ನಡ ಓದಲು ಮತ್ತು ಬರೆಯಲು ತಿಳಿದಿರುವುದು ಕಡ್ಡಾಯವಾಗಿದ್ದು, ಕೃಷಿ ಮತ್ತು ಸ್ವಉದ್ಯೋಗದಲ್ಲಿ ಆಸಕ್ತಿ ಹೊಂದಿರುವುದು ಅತ್ಯಗತ್ಯವಾಗಿದೆ.
ಉಜಿರೆಯ ಸಿದ್ಧವನದಲ್ಲಿ ನಡೆಯುವ ಈ ತರಬೇತಿಯ ಅವಧಿಯಲ್ಲಿ ಆಯ್ದ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ಕಲ್ಪಿಸಲಾಗುವುದು. ಈ ಉಚಿತ ತರಬೇತಿಯ ಸದುಪಯೋಗ ಪಡೆದುಕೊಳ್ಳಲು ಮತ್ತು ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಸಂಸ್ಥೆಯ ದೂರವಾಣಿ ಸಂಖ್ಯೆಗಳಾದ 6364561982, 8296770307, 9980885900, 9448348569, 8861514706, 9591044014, 9902594791 ಅಥವಾ ಸ್ಥಿರ ದೂರವಾಣಿ ಸಂಖ್ಯೆ 08256-236404 ಅನ್ನು ಸಂಪರ್ಕಿಸಬಹುದಾಗಿದೆ.