image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮುಡಿಪು/ಬೋಳಿಯಾರ್ : ವಿದ್ಯುತ್‌ ನಿಲುಗಡೆ

ಮುಡಿಪು/ಬೋಳಿಯಾರ್ : ವಿದ್ಯುತ್‌ ನಿಲುಗಡೆ

ಮಂಗಳೂರು : ಕೊಣಾಜೆ 110/33/11 ಕೆ.ವಿ.  ಉಪಕೇಂದ್ರದಿಂದ ಹೊರಡುವ  11 ಕೆ.ವಿ. ಮುಡಿಪು ಮತ್ತು ಬೋಳಿಯಾರ್‌  ಫೀಡರ್‌ಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಅ.9 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ.

ಈ ಫೀಡರ್‌ಗಳಲ್ಲಿ ಅಂದು ವ್ಯವಸ್ಥೆ ಸುಧಾರಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಮಲಾರ್‌, ಪಾವೂರು, ದುರ್ಗಾ ಕಾಂಪ್ಲೆಕ್ಸ್‌, ಕಿಲ್ಲೂರು, ಇನೋಳಿ, ಧರ್ಮ ನಗರ, ಕೋಪರಿಂಗೆ, ಪಜೀರ್‌, ಬರಕ, ಬೆಂಗಡಿಪದವು, ಕಾಪಿಕಾಡ್‌, ಕಂಬಳಪದವು, ಕಾಯರ್‌ಗೋಳಿ, ಆರ್ಕಾಣ, ಮುಡಿಪು, ನವಗ್ರಾಮ, ದರ್ಕಾಸ್‌, ಹೂಹಾಕುವ ಕಲ್ಲು, ಮುಳೂರು, ಮುದಾಂಗರ್‌ ಕಟ್ಟೆ, ಬಂಗಾರಗುಡ್ಡೆ, ನಂದಾರಪಡ್ಪು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Category
ಕರಾವಳಿ ತರಂಗಿಣಿ