image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜೆ.ಇ.ಇ ಮೈನ್ಸ್ ಪರೀಕ್ಷೆ: ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

ಜೆ.ಇ.ಇ ಮೈನ್ಸ್ ಪರೀಕ್ಷೆ: ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

ಪುತ್ತೂರು : ​ಕೇಂದ್ರ ಸರ್ಕಾರದ NTA ಪ್ರಾಧಿಕಾರವು ನಡೆಸಿದ 2026ನೇ ಸಾಲಿನ ಜೆ.ಇ.ಇ ಮೈನ್ಸ್ ಪ್ರವೇಶಾತಿ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ರ್ಯಾಂಕ್ ಗಳಿಸುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿನಿಯರಾದ ರಶ್ಮಿ ಕೆ ಆರ್ ಅವರು ಬಿ.ಪ್ಲಾನಿಂಗ್‌ನಲ್ಲಿ 2098ನೇ ರ್ಯಾಂಕ್ ಹಾಗೂ ಬಿ.ಆರ್ಕ್‌ನಲ್ಲಿ 3335ನೇ ರ್ಯಾಂಕ್ ಪಡೆದಿದ್ದಾರೆ. ದೀಕ್ಷಾ ಜೆ ಅವರು ಬಿ.ಪ್ಲಾನಿಂಗ್‌ನಲ್ಲಿ 1650ನೇ ರ್ಯಾಂಕ್ ಹಾಗೂ ಬಿ.ಆರ್ಕ್‌ನಲ್ಲಿ 2734ನೇ ರ್ಯಾಂಕ್ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಹಾಗೆಯೇ ಅದಿತಿ ಯು ಅವರು ಬಿ.ಪ್ಲಾನಿಂಗ್‌ನಲ್ಲಿ 2597ನೇ ರ್ಯಾಂಕ್ ಹಾಗೂ ಬಿ.ಆರ್ಕ್‌ನಲ್ಲಿ 15857ನೇ ರ್ಯಾಂಕ್ ಪಡೆದು ಸಾಧಕರ ಪಟ್ಟಿಗೆ ಸೇರಿದ್ದಾರೆ. ಮಡಿಕೇರಿಯ ರಮೇಶ್ ಕೆ ಕೆ ಮತ್ತು ರೇಣುಕಾ ಬಿ ವಿ ದಂಪತಿಯ ಪುತ್ರಿ ರಶ್ಮಿ ಕೆ ಆರ್, ಕಾಸರಗೋಡಿನ ಎಸ್ ನಾರಾಯಣ ಮತ್ತು ಪುಷ್ಪಾ ಕೆ ದಂಪತಿಯ ಪುತ್ರಿ ದೀಕ್ಷಾ ಜೆ ಹಾಗೂ ಬೆಂಗಳೂರಿನ ಉಮಾಶಂಕರ್ ಮತ್ತು ಸುಮಾ ಕೆ ಡಿ ದಂಪತಿಯ ಪುತ್ರಿ ಅದಿತಿ ಯು ಅವರ ಈ ಉನ್ನತ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಶ್ಲಾಘಿಸಿ ಅಭಿನಂದಿಸಿದ್ದಾರೆ.

Category
ಕರಾವಳಿ ತರಂಗಿಣಿ