ಪುತ್ತೂರು : ಪುತ್ತೂರಿನ ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಇತ್ತೀಚೆಗೆ ಅತ್ಯಂತ ಭಕ್ತಿ ಮತ್ತು ಉತ್ಸಾಹದಿಂದ ಶ್ರಮದಾನ ಕಾರ್ಯಕ್ರಮ ಜರುಗಿತು. ಈ ಶ್ರಮದಾನದಲ್ಲಿ ಗ್ರಾಮದ ಪ್ರಮುಖರಾದ ಜನಾರ್ಧನ, ವಿಶ್ವನಾಥ, ಮುತ್ತಪ್ಪ ಗೌಡ, ಸತೀಶ, ಬಾಬು, ಚಂದ್ರಶೇಖರ್ ಮತ್ತು ಕೃಷ್ಣಪ್ಪ ಅವರು ಪಾಲ್ಗೊಂಡು ಸೇವೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೋಟ್ಟು ಹಾಗೂ ಪ್ರಧಾನ ಕಾರ್ಯದರ್ಶಿ ಶುಭಕರ ರೈ ಬೈಲಾಡಿ ಅವರು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಆಡಳಿತ ಕಮಿಟಿ ಸದಸ್ಯರಾದ ನಾಗರಾಜ್ ಭಟ್ ಘಾಟೆ ಮತ್ತು ಜಯರಾಮ ಭಟ್ ಘಾಟೆ ಅವರು ಜತೆಯಾಗಿ ಶ್ರಮದಾನದಲ್ಲಿ ಭಾಗಿಯಾದರು. ಅಲ್ಲದೆ, ಆಯುಷ್ ರೈ ಬೈಲಾಡಿ, ಪ್ರಕಾಶ್ ರೈ ಬೈಲಾಡಿ, ಮಂಜುನಾಥ ರೈ ಬೈಲಾಡಿ ಮತ್ತು ರಾಧಾಕೃಷ್ಣ ಬೋರ್ಕರ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾಥ್ ನೀಡಿದರು. ಊರಿನ ಭಕ್ತಾದಿಗಳ ಸಹಕಾರದೊಂದಿಗೆ ದೇವಸ್ಥಾನದ ಅಭಿವೃದ್ಧಿ ಕೆಲಸಗಳು ಅತ್ಯಂತ ಯಶಸ್ವಿಯಾಗಿ ಸಾಗುತ್ತಿವೆ.