ಕಲೆ ಯಾರಪ್ಪನ ಸ್ವತ್ತು ಅಲ್ಲ ಎನ್ನುವುದನ್ನು ಸಾಬೀತು ಮಾಡಿದ ಗಾರೆ ಕಾರ್ಮಿಕ. ಮೊನ್ನೆ ಮೊನ್ನೆ ದಕ್ಷಿಣ ಕನ್ನಡದ ಯುವ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಾಸೆ ಪಟ್ಟಿಗೆ ಹೆಜ್ಜೆ ಹಾಕಿ ಸೈ ಎನಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಅವರ ಪಿಲಿ ಕುಣಿತ ಬಾರಿ ಸಂಚಲನ ಮೂಡಿಸಿತ್ತು.
ಅದರ ಬೆನ್ನಲ್ಲೆ ತಾನು ಗಾರೆ ಕೆಲಸ ಮಾಡುತ್ತಿದ್ದ ಕಟ್ಟಡದ ಹತ್ತಿರ ಮಾರ್ನಮಿ ಹುಲಿ ವೇಷ ಬಂದಿದ್ದು. ಅಲ್ಲಿ ಕೇಳಿದ ತಾಸೆ ಪಟ್ಟು ಗಾರೆ ಕಾರ್ಮಿಕನನ್ನು ಕುಣಿಯುವಂತೆ ಮಾಡಿ. ಅಲ್ಲೆ ಇದ್ದ ಕೆಲವರು ಇವನ ನೃತ್ಯವನ್ನು ಸಾಮಾಜಿಕ ಜಾಲದಲ್ಲಿ ಹರಿಬಿಟ್ಟಿದ್ದಾರೆ. ಜನರು ಈ ನೃತ್ಯಕ್ಕೆ ಫಿದಾ ಆಗಿದ್ದಾರೆ.